ಹಾಸನ : ಮೊದಲು ಮಹಿಳೆಯರು ಜಾಗೃತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕಲಿಸಬೇಕೆಂದು ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠ ಲಾಳನಹಳ್ಳಿ ಮಠಾಧೀಶರಾದ ಶರಣೆ ಜಯದೇವಿ ತಾಯಿ ತಿಳಿಸಿದರು.

ನಗರದ ಶ್ರೀ ಜವನಹಳ್ಳಿ ಮಠದಲ್ಲಿ ಹುಣ್ಣಿಮೆ ಕಾರ್ಯಕ್ರಮ. ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯದವನ್ನು ವಹಿಸಿ ಆಶೀರ್ವಚನ ನೀಡಿದ ಅವರು, ಮಹಿಳೆಯರು ಜಾಗೃತರಾಗಿ ಪರಿಪೂರ್ಣ ರಾಗಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ತಾಯಿ ಪಾತ್ರ ಮಹತ್ವದ್ದು ಎಂದು ತಿಳಿಸಿದರು.

ಶ್ರದ್ಧೆ, ಭಕ್ತಿ , ಬಾವ,ನಂಬಿಕೆದೊಂದಿಗೆ ನಾವು ಬದುಕುತ್ತಿದ್ದೇವೆ ವಿಶ್ವಾಸ ಗಳಿಸುವ ಬದುಕು ಆದರ್ಶಪ್ರಾಯವಾದುದು , ನಾವೆಲ್ಲರೂ ಕಾಯಕ ಮಾಡಿ ಜೀವನ ನಡೆಸುತ್ತಾ ಉತ್ತಮ ಬದುಕು ಕಾಣುತ್ತಿದ್ದೇವೆ. ತಂದೆ ತಾಯಿಯವರ ನಡೆ ನುಡಿ ಆಚಾರ ವಿಚಾರಗಳು ನಮ್ಮ ಜೀವನದಲ್ಲಿ ಉನ್ನತ ಮಟ್ಟದ ವ್ಯಕ್ತಿತ್ವದಿಂದ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಮಹಿಳೆಯರು ವಿದ್ಯಾವಂತರಾದರೆ ಸಮಾಜ ಇನ್ನು ಹೆಚ್ಚಿನ ರೀತಿಯಲ್ಲಿ ಸುಧಾರಣೆ ಕಾಣಬಹುದು ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಾಸನ ಜವನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ರವರು, ಜವೇನಹಳ್ಳಿ ಮಠದಲ್ಲಿ ಜ್ಯಾತ್ಯಾತೀತವಾಗಿ ಎಲ್ಲಾ ಸಮಾಜದವರನ್ನು ಒಳಗೊಂಡಂತೆ ಈ ಹುಣ್ಣಿಮೆ ಕಾರ್ಯಕ್ರಮ ಹಾಗೂ ಪ್ರತಿ ತಿಂಗಳಲ್ಲಿ ಬರುವ ದಾರ್ಶನಿಕರ ಸ್ಮರಣೆ ಕಾರ್ಯಕ್ರಮ ಮತ್ತು ಧ್ಯಾನ ಪ್ರವಚನಗಳನ್ನು ಏರ್ಪಡಿಸುವ ಮೂಲಕ ಹಾಗೂ ಬೆಳದಿಂಗಳ ಊಟ ಪ್ರಸಾದ ನೀಡುವ ಮೂಲಕ ಈ ಕಾರ್ಯಕ್ರಮ ಪ್ರತಿ ತಿಂಗಳು ಏರ್ಪಡಿಸಲಾಗಿದೆ.

ಇದರಿಂದ ಸಮಾಜದ ಹಲವು ದಾರ್ಶನಿಕರ ವಿಚಾರಗಳನ್ನು ಭಕ್ತರಿಗೆ ಅಶೀರ್ವಚನ ಮೂಲಕ ತಿಳಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲ್ಯಾಣಪುರ ಬಸವೇಶ್ವರ ಮಠದ ಮಠಾಧೀಶರಾದ ಶರಣೆ ಚಿನ್ನಮ್ಮಯಿ ಮಾತಾಜಿ, ಶ್ರೀ ಜವನಹಳ್ಳಿ ಮಠದ ಭಕ್ತರಾದ ಕಟ್ಟಾಯ ಶಿವಕುಮಾರ್. ಮಹಾಂತೇಶ್. ಹೆಚ್ ವಿಜಯಕುಮಾರ್.. ಅವಿನಾಶ್ , ಹೇಮಂತ್ ಕುಮಾರ್.ಬಟ್ಟೆಗೋಪಾಲ್, ವಿಜಯಲಕ್ಷ್ಮಿ, ಕುಮಾರ್ ನಿಶಾ ಕೊಥಾರಿ ಮೊದಲಾದವರು ಉಪಸ್ಥಿತರಿದ್ದರು.ನೂರಾರು ಭಕ್ತರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *