ಹಾಸನ: ತಾಲೂಕಿನ ಸಮೀಪ ಇರುವ ಹರಳಹಳ್ಳಿಯಲ್ಲಿರುವ ಕುವೆಂಪು ಶತಮಹೋತ್ಸವ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಸನ ಲಯನ್ಸ್ ಕ್ಲಬ್ ವತಿಯಿಂದ ಶುಕ್ರವಾರದಂದು ಶಾಲೆಯ ಕಾಂಪೌಂಡ್ ಹಾಗೂ ಮುಂಬಾಗ ಸ್ವಾಗತ ಕಮಾನಿಗೆ ಬಣ್ಣ ಒಡೆಸುವ ಕಾರ್ಯ ಮಾಡುವ ಮೂಲಕ ಸೇವಾ ಚಟುವಟಿಕೆಯಲ್ಲಿ ತೊಡಗಿದರು.

ಈ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಲಯನ್ ಕ್ಲಬ್ ಅಧ್ಯಕ್ಷ ಎಚ್.ಕೆ. ನಾಗೇಶ್, ಹರಳಹಳ್ಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಎಚ್.ಎಮ್. ಶಿವಕುಮಾರ್, ಇದರ ಸಂಪೂರ್ಣ ವೆಚ್ಚವನ್ನು ಸಂದಾಯ ಮಾಡಿದರು. ನಂತರ ಶಾಲೆಯ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ವರ್ಗವು ಸೇವಾ ಚಟುವಟಿಕೆಯನ್ನು ಶ್ಲಾಘಿಸಿ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.

ಇದೆ ವೇಳೆ ಶಾಲೆಯ ಮುಖ್ಯ ಶಿಕ್ಷಕರಾದ ವೈ.ಜೆ. ದಾಕ್ಷಾಯಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಹ ಶಿಕ್ಷಕರಾದ ಹೆಚ್. ಪೂರ್ಣಿಮಾ,ಎಚ್.ಎಂ.ಕಾಂತರಾಜು, ಯಶೋಧಬಾಯಿ, ಕೆ.ಟಿ. ಸುರೇಶ್, ಚಂದ್ರ, ಗುರು ಶಾಂತಪ್ಪ, ಕೆ.ಎಸ್. ಕಾಂತರಾಜು, ಮತ್ತು ಟಿ.ಸಿ. ಅಮೃತ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *