ಬೇಲೂರು : ಡಾ.ಅಂಬೇಡ್ಕರ್‌ರವರ ೧೩೩ನೇ ಜಯಂತಿ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಬೇಲೂರು ತಾಲೂಕು ಸಮಿತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಿಂದ ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಸಲ್ಲಿಸಿ, ಉಚಿತ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಡಾ.ಅಂಬೇಡ್ಕರ್ ಜಯಂತಿಯನ್ನು ವಿಶೇಷವಾಗಿ ಆಚರಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಹಾಸನ ಜಿಲ್ಲಾ ಪ್ರಧಾನ ಸಂಚಾಲಕ ಬಿ.ಎಲ್.ಲಕ್ಷö್ಮಣ್ ಮಾತನಾಡಿ, ಶೋಷಿತ ಸಮುದಾಯಗಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರೆ ಅದು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಮಾತ್ರ ಸಾಧ್ಯ ಎಂಬುದನ್ನು ಜಗತ್ತಿಗೆ ತೋರಿಸಿ ಕೊಟ್ಟವರೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ರವರು ದೀನ ದಲಿತರ ಏಳಿಗೆಗಾಗಿ ಸಮಾನತೆಯ ಹಕ್ಕಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ ಅಂಬೇಡ್ಕರ್‌ರವರ ಜನ್ಮ ದಿನಾಚರಣೆಯನ್ನು ಹಬ್ಬವನ್ನಾಗಿ ಆಚರಿಸುತ್ತಿದ್ದೇವೆ.

ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಭಾರತ ಮಾತ್ರವಲ್ಲದೆ ವಿಶ್ವವೇ ಆಚರಿಸುತ್ತಿದೆ. ಡಾ.ಅಂಬೇಡ್ಕರ್‌ರವರು ದಲಿತರಿಗೆ ಮಾತ್ರ ನಾಯಕರಾಗದೆ ಕಾರ್ಮಿಕ ವರ್ಗ, ಶೋಷಿತ ಸಮಾಜ, ಮಹಿಳೆಯರ ಹಕ್ಕಿಗಾಗಿ ಹೋರಾಡಿ ತಮ್ಮದೇ ವಿವೇಚನೆಯೊಂದಿಗೆ ಭಾರತದ ಸಂವಿಧಾನ ರಚಿಸಿ ತಳ ಸಮುದಾಯಗಳ ಏಳಿಗೆಗಾಗಿ ಸಮ ಸಮಾಜ ನಿರ್ಮಿಸುವ ಮೂಲಕ ದೇಶದ ಎಲ್ಲ ಜಾತಿ ಜನಾಂಗದವರಿಗೆ ಆದರ್ಶ ಪ್ರಾಯವಾಗಿದ್ದಾರೆ. ಆದ್ದರಿಂದ ಪ್ರತಿವರ್ಷ ಅವರ ಜನ್ಮ ದಿನಾಚರಣೆಯಂದು ನಮ್ಮ ಸಂಘಟನೆಯಿಂದ ಉಚಿತವಾಗಿ ರಕ್ತದಾನ ಮಾಡುವ ಮೂಲಕ ಇತರರ ಜೀವ ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು ಮಾತನಾಡಿ, ವಿಶ್ವ ಜ್ಞಾನಿ ಡಾ.ಅಂಬೇಡ್ಕರ್‌ರವರನ್ನು ವಿಶ್ವವೇ ಕೊಂಡಾಡುತ್ತದೆ. ಆಡು ಮುಟ್ಟದ ಸೊಪ್ಪಿಲ್ಲ. ಅಂಬೇಡ್ಕರ್ ಓದದ ಪುಸ್ತಕವಿಲ್ಲ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಅವರು ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದವರು.

ಮಹಿಳೆಯರ ಹಕ್ಕುಗಳಿಗಾಗಿ ಕೇಂದ್ರದ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕೈಕ ದೀಮಂತ ನಾಯಕರೇ ಅಂಬೇಡ್ಕರ್‌ರವರು. ಅವರು ಹಾಕಿಕೊಟ್ಟ ದಾರಿಯಲ್ಲಿ ಪ್ರತಿಯೊಬ್ಬರೂ ನಡೆದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತ್ತಾಗುತ್ತದೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ದ ಮುಖಂಡರಾದ ಕೃಷ್ಣಯ್ಯ, ಹೊಯ್ಸಳ, ನಿಂಗರಾಜು, ಧರ್ಮಯ್ಯ, ಭದ್ರಯ್ಯ, ರುದ್ರೇಶ್, ಮೀನಾಕ್ಷಮ್ಮ, ಜಯಂತಿ, ಪ್ರವೀಣ್, ಪ್ರದೀಪ, ದಿಲೀಪ್, ನಾಗರಾಜು, ಕಿರಣ್, ಸಿದ್ದೇಶ್, ಶರತ್, ಯೋಗೇಶ್, ದೇವರಾಜು, ಮಲ್ಲೇಶ್, ಉಮೇಶ್, ಶಶಿಕುಮಾರ್, ಲಕ್ಷö್ಮಣ್, ನೂರ್ ಅಹಮದ್, ತೀರ್ಥಕುಮಾರ್,ಹೊನ್ನಪ್ಪ, ಚಂದ್ರು ಸೇರಿದಂತೆ ಇತರರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *