
ಆಲೂರು : ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಶ್ರೇಯಸ್ ಎಂ ಪಟೇಲ್ ಮಾತನಾಡಿ ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಆಲೂರು ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮ್ಮ ಪಕ್ಷದ ಮುಖಂಡರು ಹಾಗೂ ನಾಯಕರು ಕಾರ್ಯಕರ್ತರೊಡನೆ ಮತಯಾಚನೆ ಮಾಡುತ್ತಿದ್ದೇವೆ ಈ ಭಾಗದ ಜನರಿಂದ ಅಭೂತಪೂರ್ವ ಬೆಂಬಲಸಿಕ್ಕಿದ್ದು ಜನರೇ ನಮಗೆ ವಯಕ್ತಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ನಿರ್ಧರಿಸಿದ್ದಾರೆ.
ಈ ಭಾಗದ ಜನರು ಕೂಡ ಕಾಂಗ್ರೆಸ್ ಪಕ್ಷದ ಆಡಳಿತ ಹಾಗೂ ಗ್ಯಾರಂಟಿಗಳನ್ನು ನಂಬಿ ಅದರ ತತ್ವ ಸಿದ್ದಂತಾಗಳನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, ಹಾಗೂ ನಮಗೆ ಉತ್ತಮ ಬೆಂಬಲವನ್ನು ನೀಡುತ್ತಿದ್ದಾರೆ,, ಜನರು ಜೆಡಿಎಸ್ ಪಕ್ಷದ ಅಪ್ಪ ಮಕ್ಕಳ ಕುಟುಂಬ ರಾಜಕಾರಣದ ದಬ್ಬಾಳಿಕೆ ಅಹಂಕಾರವನ್ನು ನೋಡಿ ಬದಲಾವಣೆ ಬಯಸುತ್ತಿದ್ದಾರೆ ಮುಂದೆ ಜನರೇ ಅವರಿಗೆ ಪ್ರತ್ಯುತ್ತರ ಉತ್ತರ ನೀಡುತ್ತಾರೆ.
ಇನ್ನೂ ಈ ಆಲೂರು ಸಕಲೇಶಪುರ ಭಾಗದಲ್ಲಿ ಅನೇಕ ಜ್ವಲಾಂತ ಸಮಸ್ಯೆಗಳು ಇದ್ದು ಕಣ್ಣು ಮುಂದೆ ಕಟ್ಟಿದಂತೆ ಕಾಣುತ್ತಿದೆ, ಕಾರಣ ಆನೆ ಹಾವಳಿ, ಹಾಗೂ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರನೀಡದಿರುವುದು ಎತ್ತಿನಹೊಳೆ ಯೋಜನೆಯಲ್ಲಿ ಜಮೀನು,ಮನೆ, ಕಳೆದುಕೊಂಡಿರುವುದು ಬೆಳೆಹಾನಿ, ಹಲವಾರು ಸಮಸ್ಯೆಯಿಂದ ಈ ಭಾಗದ ರೈತರುನೆಮ್ಮದಿಯ ಜೀವನವವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಹಳ್ಳಿಗಳಿಗೆ ಹೋದರೆ ಈಗಲೂ ಗುಂಡಿ ಬಿದ್ದ ರಸ್ತೆಗಳೇ ಜಾಸ್ತಿ, ಮಲೆನಾಡು ಭಾಗವಾದರೂ ನೀರಿನ ಸಮಸ್ಯೆ ಎದುರಾಗಿದೆ,
ಹಾಗಾಗಿ ಈ ಬಾರಿ ನಮಗೆ ಒಂದು ಗೆಲ್ಲಲು ನಮಗು ಒಂದು ಅವಕಾಶ ನೀಡಿ ನಿಮ್ಮ ಸೇವೆಯನ್ನು ಮಾಡಲು ಇಲ್ಲಿಯ ಸಮಸ್ಯೆಯನ್ನು ಬಗೆಹರಿಸಲು ಅವಕಾಶಮಾಡಿಕೊಡಿಯೆಂದರು ಇನ್ನೂ ಮಾಧ್ಯಮದವರ ಪ್ರಶ್ನೆ ಒಂದಕ್ಕೆ ಉತ್ತರ ನೀಡಿದ ಅವರು ಈ ಭಾಗದಲ್ಲಿ ಕಾಡನೇ ಉಪಟಳ ವನ್ಯಜೀವಿ ಹಾಗೂ ಮಾನವ ಸಂಘರ್ಷ, ಆನೆ ಕಾರಿಡರ್ ಆನೆಯಿಂದ ಮೃತ ಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ ಕಾಫಿ ಬೆಳೆಗಾರರ ಸಮಸ್ಯೆ ಇಂತಹ ಸಮಸ್ಯೆಗಳು ಇಲ್ಲಿ ಬೇರು ಬಿಟ್ಟಿದ್ದು ಈ ನನ್ನನ್ನು ಈ ಕ್ಷೇತ್ರದ ಜನರ ಗೆಲ್ಲಿಸಿದ್ದೆ ಆದಲ್ಲಿ ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸುವಂತಹ ಪ್ರಮಾಣಿಕ ಪ್ರಯತ್ನದ ಜೊತಗೆ ಕೆಲಸವನ್ನು ಮಾಡುತ್ತೇನೆ ನಾನು ಗೆಲ್ಲುವುದು ಸತಸಿದ್ದ ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿ ಇದ್ದವರು ಈ ಭಾಗದ ಕಡೇ ತಿರುಗಿಯುಸಹ ನೋಡಿಲ್ಲವೆಂದು ಜನರೇ ಹೇಳುತ್ತಿದ್ದಾರೆ ಹಾಗಾಗಿ ಈ ಬಾರಿ ಜನ ಬದಲಾವಣೆಯನ್ನು ಬಯಸಿದ್ದು ನಮ್ಮ ಮೇಲೆ ನಂಬಿಕೆಯನ್ನು ಇಟ್ಟಿದ್ದಾರೆ ಅದನ್ನು ನಾನು ಉಳಿಸಿಕೊಳ್ಳುತ್ತೇನೆ.
ಆಲೂರು ಸಕಲೇಶಪುರ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು ನಾವು ಗೆದ್ದೇ ಗೆಲ್ಲುತ್ತೇವೆಯಂಬ ಆತ್ಮ ವಿಶ್ವಾಸ ವ್ಯಕ್ತ ಪಡಿಸಿದರು,ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಜೆಡಿಎಸ್ ಬಿಜೆಪಿ ಪಕ್ಷತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮುಖಂಡರು ಹಾಗೂ ನೂರಾರು ಕಾರ್ಯಕರ್ತರಿದ್ದರು


