ಸಕಲೇಶಪುರ : ಚುನಾವಣೆಯ ನೆಪವೊಡ್ಡಿ ಸರ್ಕಾರದ ಆದೇಶದಂತೆ ಸಕಲೇಶಪುರ ತಾಲೂಕು ಆಡಳಿತ ಹಿಂದೂ ಮುಖಂಡ ರಘು ಸಕಲೇಶಪುರ ಹಾಗೂ ಶಿವು ಜಿಪ್ಪಿ’ಯನ್ನು ಹಾಸನ ಜಿಲ್ಲೆಯಿಂದ ಗಡೀಪಾರು ಮಾಡಿ ಆದೇಶಿಸಿತ್ತು.

ಮೋದಿ ಪರ ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದನ್ನು ಸಹಿಸದ ಕಾಂಗ್ರೆಸ್ಸಿಗರ ಕುಮ್ಮಕ್ಕಿನಿಂದ ಮಾಡಿರುವ ಗಡೀಪಾರು ಶಿಫಾರಸ್ಸನ್ನು ಪರಿಶೀಲನೆ ಮಾಡಿ ಎಂದು ಹಿಂದೂ ಸಂಘಟನೆಗಳು ಸೇರಿದಂತೆ ಬಿಜೆಪಿ ಮುಖಂಡರು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಕೈವಾಡ ಇದೆ ಎಂದು ಪ್ರಬಲವಾಗಿ ಪ್ರತಿಪಾದಿಸಿದರು. ಆದರೂ ಸಹ ಉಪವಿಭಾಗಾಧಿಕಾರಿಗಳು ಏಪ್ರಿಲ್ 15 ರಂದು ಹಾಸನ ಜಿಲ್ಲೆಯಿಂದ ಕೊಡಗು ಜಿಲ್ಲೆಯ ಮಡಿಕೇರಿಗೆ ಗಡೀಪಾರು ಮಾಡಿ ಆದೇಶಿಸಿದರು.

ಈ ನಡುವೆಯೂ ಮಡಿಕೇರಿಯಲ್ಲು ಸಹ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ರಘು ಸಕಲೇಶಪುರ. ಮಡಿಕೇರಿಯ ಸಿದ್ದಾಪುರದಲ್ಲಿನ ಬಿಜೆಪಿ ಕಾರ್ಯಕರ್ತನ ಪೂರ್ವ ನಿಯೋಜಿತ ಕೊಲೆ ಪ್ರಕರಣವನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ನಡುವೆ ಗಡೀಪಾರು ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ ಹಿಂದೂ ಸಂಘಟನೆಗಳ ಕಾನೂನು ಸಲಹೆಗಾರರು ವಕೀಲರಾದ ವಿನೋದ್ ಕುಮಾರ್ ನೇತೃತ್ವದಲ್ಲಿ ನಿಯೋಗ ಇದೊಂದು ಪೂರ್ವ ನಿಯೋಜಿತ ಚುನಾವಣೆಯ ಅಜೆಂಡಾ ಎಂಬುದನ್ನು ಹೈಕೋರ್ಟ್ ನ್ಯಾಯಾಧೀಶರ ಎದುರು ಮಂಡಿಸಿದ್ದರು. ಅಂತಿಮವಾಗಿ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರು ಗಡೀಪಾರು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ.

ಹಿಂದೂ ಸಂಘಟನೆಗಳಿಗೆ ಬಹುದೊಡ್ಡ ಗೆಲುವು ಎಂದರೆ ತಪ್ಪಾಗಲಾರದು. ಕಾಂಗ್ರೆಸಿಗರು ಚುನಾವಣೆಗೆ ರೂಪಿಸಿದ ಷಡ್ಯಂತ್ರಕ್ಕೆ ತಕ್ಕ ಪಾಠವನ್ನು ಕಳುಹಿಸುತ್ತೇವೆ ಎಂದು ಹಿಂದೂ ಮುಖಂಡ ರಘು ಸಕಲೇಶಪುರ ಹೇಳಿಕೆ ನೀಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *