
ಬೇಲೂರು : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ ಮಾನವ ಸರಪಳಿ ನಡೆಸಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿ ಕಾಮುಕ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ ಆರ್ ವೆಂಕಟೇಶ್ ವಿಕೃತ ಕಾಮಿ ಹಾಗೂ ಸಂಸದ ಎನ್ನುವ ಪದಕ್ಕೆ ನಾಚಿಕೆ ಪಡುವಂತಹ ಇಂತಹ ವ್ಯಕ್ತಿಯನ್ನು ಕೂಡಲೆ ಬಂಧಿಸಬೇಕು.
ಈತನನ್ನು ಕೂಡಲೆ ದೇಶದಿಂದ ಗಡಿಪಾರು ಮಾಡಬೇಕು.
ಇಂತಹ ಅನಿಷ್ಟವಾದ ಘನಘೋರ ಕೃತ್ಯವನ್ನು ಯಾರು ಸಹ ಮಾಡುವುದಿಲ್ಲ.ದೇಶದಲ್ಲಿಯೇ ಹಾಸನ ಜಿಲ್ಲೆಗೆ ವಿಶೇಷವಾದ ಸ್ಥಾನಮಾನವಿದೆ.
ಈ ಜಿಲ್ಕೆಯಲ್ಲಿ ಇಂತಹ ವಿಕೃತ ಕಾಮಿ ಇರುವುದು ನಿಜಕ್ಕೂ ದುರಾದೃಷ್ಟಕರ.ಕೇವಲ ಟಿವಿ ಪುಸ್ತಕಗಳಲ್ಲಿ ವಿಕೃತ ಕಾಮಿಯ ಬಗ್ಗೆ ಈ ಹಿಂದೆ ಕೇಳುತ್ತಿದ್ದೆವು.ಆದರೆ ಕಣ್ಣಾರೆ ನೋಡುವಂತಹ ಕೃತ್ಯ ಕಂಡುಬಂದಿರುವುದು ನಮ್ಮ ಜಿಲ್ಲೆಯ ವ್ಯಕ್ತಿ ಎನ್ನುವುದಕ್ಕೆ ನಮಗೆ ನಾಚಿಕೆಯಾಗುತ್ತದೆ.
ಇಂತಹ ವ್ಯಕ್ತಿಗೆ ಯಾವುದೇ ಕಾರಣಕ್ಕೂ ಹಾಸನ ಜಿಲ್ಲೆಗೆ ಬಿಡದಂತೆ ಕೂಡಲೆ ಆತನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವುದಲ್ಲದೆ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮಹಮ್ಮದ್ ದಾಹೂದ್ ಮಾತನಾಡಿ ದೇಶದ ಹೆಮ್ಮೆಯ ಪ್ರಧಾನಿ ದೇವೇಗೌಡರ ಮೊಮ್ಮಗ ಎನ್ನುವುದಕ್ಕೆ ನಾಚಿಕೆಯಾಗಬೇಕು.ಹಾಸನಚಜಿಲ್ಲೆಯೆ ತಲೆತಗ್ಗಿಸುವಂತಹ ಕೆಲಸವಮಾಡಿದ್ದಾರೆ .
ಇಂತಹ ಕ್ರೂರ ಮನಸ್ಥಿತಿ ಹೊಂದಿರುವ ವ್ಯಕ್ತಿಯನ್ನು ಮಹಿಳೆಯರೆ ಕಲ್ಲಲ್ಲಿ ಹೊಡೆದು ತಕ್ಕ ಶಾಸ್ತಿ ಮಾಡಬೇಕು.ಇನ್ನು ಅವರ ಚಿಕ್ಕಪ್ಪ ಹೆಚ್ ಡಿ ಕೆ ಅವರು ಮನೆಯ ಹೆಣ್ಣು ಮಕ್ಕಳು ಬಿಟ್ಟಿಭಾಗ್ಯಗಳಿಂದ ಹಾಳಾಗುತ್ತಿದ್ದಾರೆ ಎನ್ನುತ್ತಾರೆ.ಆದರೆ ನಿಮ್ಮನೆಯ ಇಂತಹ ಕಾಮುಕನಿಂದಲೆ ಹೆಣ್ಣು ಮಕ್ಕಳು ಹಾಳಾಗುತ್ತಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಹಾಗು ಪುರಸಭೆ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ ಇಡೀ ಮನುಕುಲವೇ ತಲೆತಗ್ಗಿಸುವಂತ ಕೆಲಸವನ್ನು ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಮಾಡಿದ್ದು ಪ್ರತಿನಿತ್ಯ ಮಾತೃದೇವೊ ಭವ ಎನ್ನುವ ಆ ಮನೆಯ ಸಂಸ್ಕಾರ ಏನಾಗಿದೆ.
ಇಂತಹ ವ್ಯಕ್ತಿಯಿಂದ ಸುಮಾರು ೨೫ ವರ್ಷಗಳಿಂದಲೂ ಸಹ ದೌರ್ಜನ್ಯ ದಬ್ಬಾಳಿಕೆ ನಡೆಸಿಕೊಂಡು ಬರುತ್ತಿರುವ ಇಂತಹ ಜನರ ಮೇಲೆ ಕ್ರಮ ಕೈಗೊಂಡು ಸಂತ್ರಸ್ತರಿಗೆ ಕೂಡಲೇ ಸರ್ಕಾರ ರಕ್ಷಣೆ ಕೊಡಬೇಕು ಎಂದರು.
ಮಾಜಿ ಜಿಲ್ಲಾಪಂಚಾಯತಿ ಸದಸ್ಯ ಸೈಯದ್ ತೌಫಿಕ್ ಮಾತನಾಡಿ ಹಾಸನ ಜಿಲ್ಲೆಗೆ ದೇವೇಗೌಡರ ನಂತರ ಕೀರ್ತಿ ತರುವ ಕೆಲಸವನ್ನು ಇಂತಹ ಕಾಮುಕ ಮಾಡಿದ್ದಾನೆ.
ಮಹಿಳೆಯರಿಗೆ ಗೌರವ ಕೊಡುವ ಕೆಲಸ ಮಾಡುವ ನಮ್ಮ ಜಿಲ್ಲೆಯಲ್ಲಿ ಇಂತಹ ಕಾಮುಕನಿಂದ ತಲೆತಗ್ಗಿಸುವ ಕೆಲಸ ಆಗಿದೆ.
ನಮ್ಮಿಂದಲೇ ಮೀಸಲಾತಿ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಮೀಸಲಾತಿ ಇದೇ ಎನು ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಜಿ ಶಾಂತಕುಮಾರ್,ಅಶೋಕ್ ನಾಯಕ್,ರತ್ನ ಸತ್ಯನಾರಾಯಣ್,ಮುಖಂಡರಾದ ಅಶೋಕ್,ಸೌಮ್ಯ ಆನಂದ್,ಚೇತನ್ ,ಸಚಿನ್,ಮುದ್ದಮ್ಮ,ಮಲ್ಲಿಕಾ,ಇತರರು ಹಾಜರಿದ್ದರು.
