
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೆಚ್. ವಿ ಹಳ್ಳಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ.
ಸಕಲೇಶಪುರ:- ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ ಹೆಚ್. ವಿ ಹಳ್ಳಿಯ ಹಿರಿಯ ಪ್ರಾಥಮಿಕ ಪಾಠಶಾಲೆಯ 24 ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕರಾದ ಕರಡಿಗಾಲ ಅರುಣ್ ಗೌಡ ವಿತರಿಸಿದರು .
ಕಳೆದ ವರ್ಷದಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಾ ಬಂದಿರುವ ಕರಡಿಗಾಲ ಅರುಣ್ ಗೌಡ ಇಂದು ಶಾಲೆಯ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಎರಡು ನೋಟ್ ಪುಸ್ತಕ ಹಾಗೂ 5ಪೆನ್ನುಗಳನ್ನು ಹಾಗೂ ಐದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ 5 ನೋಟು ಪುಸ್ತಕಗಳು ಹಾಗೂ 5 ಪೆನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿಯದ ಪುಷ್ಪಲತಾ ” ಇಂತಹ ದಾನಿಗಳಿಂದ ಸರ್ಕಾರಿ ಶಾಲೆಯಲ್ಲಿ ಕಲಿತಿರುವ ಮಕ್ಕಳಿಗೆ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಇನ್ನು ಹೆಚ್ಚಿನ ಧಾನಿಗಳ ಪ್ರೋತ್ಸಾಹ ಶಾಲಾ ಮಕ್ಕಳಿಗೆ ನೀಡುವಂತಾಗಲಿ.” ಎಂದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕಿಯರಾದ ಶಾರದ, ನಿರ್ಮಲ ಎಸ್.ಡಿ. ಎಮ್. ಸಿ ಅಧ್ಯಕ್ಷರಾದ ಮಧು,ಉಪಾಧ್ಯಕ್ಷರು ನಂದನ್ ಇದ್ದರು .

