
ಹಾಸನ: ಮಕ್ಕಳಲ್ಲಿ ಶಿಸ್ತಿನ ಮನೋಭಾವ ಬೆಳೆಸಲು ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜದ ಮಹತ್ವವನ್ನು ತಿಳಿಸುವ ಮೂಲಕ ಭಾರತ್ ಸೇವಾದಳ ಉತ್ತಮವಾದ ಕೆಲಸ ನಿರ್ವಹಿಸುತ್ತಾ ಬರುತ್ತಿದೆ ಎಂದು ಪದವಿ ಪೂರ್ವ ಕಾಲೇಜು ಉಪನಿರ್ದೇಶಕರಾದ ಸಿ.ಎಂ. ಮಹಾಲಿಂಗಯ್ಯ ತಿಳಿಸಿದರು.
ನಗರದ ಎನ್.ಆರ್. ವೃತ್ತದ ಬಳಿ ಇರುವ ಸಂತ ಫಿಲೋಮಿನಾ ಕಾಲೇಜು ಸಭಾಂಗಣದಲ್ಲಿ ಭಾರತ ಸೇವಾದಳ ಮತ್ತು ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ಸೇವಾದಳ ಮಾಹಿತಿ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಭಾರತ ಸೇವಾದಳದ ಚಟುವಟಿಕೆಗಳು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು, ಕಾಲೇಜುಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಕಾನೂನು ಜಾಗೃತಿ ಆರೋಗ್ಯ ಅರಿವು ಕಾರ್ಯಕ್ರಮಗಳು ಮತ್ತು ಸಸಿ ನೆಡುವ ಕಾರ್ಯಕ್ರಮಗಳು ರಾಷ್ಟ್ರಗೀತೆ ರಾಷ್ಟ್ರಧ್ವಜ ಮಾಹಿತಿ ಕಾರ್ಯಗಾರವನ್ನು ಅತ್ಯುತ್ತಮವಾಗಿ ನಡೆಸುತ್ತಾ ಬರುತ್ತಿದೆ ಹಾಗೂ ಇಲಾಖೆಯೊಂದಿಗೆ ಉತ್ತಮವಾದ ಸಹಕಾರ ನೀಡುತ್ತಿದ್ದಾರೆ ಎಂದು ಸೇವಾದಳದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಭಾರತ ಸೇವಾದಳದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧ್ಯಕ್ಷರು ಎಮ್.ಕೆ. ಕಮಲ್ ಕುಮಾರ್ ರವರು ಮಾತನಾಡಿ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಾಲಾ-ಕಾಲೇಜುಗಳಲ್ಲಿ ಘಟಕಗಳನ್ನು ನಡೆಸುತ್ತಿದ್ದು, ಮಕ್ಕಳಲ್ಲಿ ಉತ್ತಮವಾದ ಸಂಸ್ಕೃತಿ, ಸಂಸ್ಕಾರ ಕಲಿಸುವ ನಿಟ್ಟಿನಲ್ಲಿ ರಾಷ್ಟ್ರ ಅಭಿಮಾನವನ್ನ ಮೂಡಿಸುವ ಸಲುವಾಗಿ ಶಾಲಾ ಮಕ್ಕಳಲ್ಲಿ ಶಿಸ್ತು ಸಂಯಮ ಸಮಯ ಪ್ರಜ್ಞೆಯನ್ನು ಬೆಳೆಸಲು ಮಕ್ಕಳಿಗೆ ಸೇವಾದಳದ ತತ್ವಗಳನ್ನು ನೀಡಲಾಗುತ್ತಿದೆ ಎಂದರು.
ವಿಶೇಷವಾಗಿ ಉಪನಿರ್ದೇಶಕರಾದ ಸಿ.ಎಂ. ಮಹಾಲಿಂಗಯ್ಯ ರವರು ಭಾರತ ಸೇವಾದಳದ ಚಟುವಟಿಕೆಗಳಿಗೆ ಅತ್ಯುತ್ತಮವಾದ ಸಹಕಾರವನ್ನು ನೀಡುತ್ತಿದ್ದಾರೆ ಎಂದು ವಿಶೇಷ ಅಭಿನಂದನೆಯನ್ನು ಸಲ್ಲಿಸುವುದಾಗಿ ಹೇಳಿದರು.
ವಲಯ ಸಂಘಟಕರಾದ ವಿ.ಎಸ್. ರಾಣಿ ಕಾರ್ಯಕ್ರಮದ ಉದ್ದೇಶ ಕಾಲೇಜುಗಳಲ್ಲಿ ಸೇವಾದಳದ ಘಟಕಗಳ ನಿರ್ವಹಣೆ ಮತ್ತಿತರ ಮಾಹಿತಿಯನ್ನು ನೀಡಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್ ಬಿ. ಎನ್. ರವರು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಮಾಹಿತಿಯನ್ನು ನೀಡಿದರು. ಮತ್ತು ಎಲ್ಲರಿಗೂ ಸ್ವಾಗತವನ್ನು ಹೆಚ್. ಮಹೇಶ್ ರವರು ಗಾಂಧಿ ಟೋಪಿಯನ್ನು ಮತ್ತು ಗುಲಾಬಿ ಹೂ ನೀಡುವ ಮೂಲಕ ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಸುರೇಂದ್ರ ಕುಮಾರ್ ರವರು ಮತ್ತು ಕಾರ್ಯದರ್ಶಿಗಳಾದ ಟಿ.ಎಸ್. ಕುಮಾರಸ್ವಾಮಿ ರವರು ಹಾಗೂ ಖಜಾಂಚಿಗಳಾದ ಡಿ.ಕೆ. ಕುಮಾರಯ್ಯ, ನಿರ್ದೇಶಕರಾದ ಬಿ.ಆರ್. ದೇವರಾಜ್ ಮತ್ತು ಹಿರಿಯ ಸದಸ್ಯರಾದ ಗಣಪತಿ ಮತ್ತು ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷರಾದ ಶೋಭ ಹಾಗೂ ಸಂತ ಫಿಲೋಮಿನಾ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಜಸಿಂತಾ ಕೊರಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾರತ ಸೇವಾ ದಳದ ಕಾಲೇಜು ಶಾಖಾ ನಾಯಕರಾದ ಐಚನಹಳ್ಳಿ ಕೃಷ್ಣಪ್ಪ ಕಾರ್ಯಕ್ರಮ ನೆರವೇರಿಸಿದರು. ಮತ್ತು ಜಿಲ್ಲೆಯ ಸುಮಾರು ೧೭೦ ಕ್ಕೂ ಹೆಚ್ಚು ಕಾಲೇಜಿನ ಪ್ರಾಂಶುಪಾಲರುಗಳು ಹಾಗೂ ಉಪ ನಿರ್ದೇಶಕರ ಕಚೇರಿಯ ಅಧಿಕಾರಿ ವೃಂದದವರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇದೇ ಕಾರ್ಯಕ್ರಮದಲ್ಲಿ ವಿಶೇಷವಾಗಿ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಜ್ವರದ ಕಾಯಿಲೆ ಮತ್ತು ಆರೋಗ್ಯ ಮಾಹಿತಿಯನ್ನು ಸಹ ಆರೋಗ್ಯ ಇಲಾಖೆಯಿಂದ ನೀಡಲಾಯಿತು. ಮತ್ತು ಭಾರತ ಸೇವಾದಳದ ಗ್ರಂಥಾಲಯಕ್ಕೆ ಭಾರತ ಸೇವಾ ದಳದ ಸಾಹಿತ್ಯದ ಪುಸ್ತಕಗಳನ್ನು ಪ್ರತಿ ಕಾಲೇಜು ನೀಡಲಾಯಿತು.
ನಂತರ ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮ ಮುಗಿಸಲಾಯಿತು.
