ಸಕಲೇಶಪುರ :ಪ್ರತಿ ವರ್ಷ ದಂತೆ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆಯುವ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಕೊಡುವ ವಿವಿಧ ವಿಭಾಗದ ಪ್ರಶಸ್ತಿಗೆ ನಮ್ಮ ತಾಲ್ಲೂಕಿನಿಂದ ವಿಜಯವಾಣಿ ಪತ್ರಿಕೆಯ ಪತ್ರಕರ್ತರಾದ ಕಾಂತ್ರಾಜ್ ಹೊನ್ನೆಕೋಡಿ, ಜನಮಿತ್ರ ಪತ್ರಿಕೆಯ ಪತ್ರಕರ್ತರಾದ ಯೋಗೇಶ್, ಹಾಗೂ ಬೀಮವಿಜಯ ಹಾಗೂ ನಮ್ಮಹಾಸನ ಟಿವಿ ಪತ್ರಕರ್ತರಾದ ಮಲ್ನಾಡ್ ಮೆಹಬೂಬ್ ಹಾಗೂ ಹಾಸನಮಿತ್ರ ಪತ್ರಿಕೆಯ ಪತ್ರಕರ್ತರಾದ ಶಿವಕುಮಾರ್ ರವರು ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಪ್ರಮಖರಾಗಿದ್ದಾರೆ.

ಪೌರ ಕಾರ್ಮಿಕರಿಗೆ ಗಗನ ಕುಸುಮವಾದ ಸ್ವಂತ ಸೂರು ಜೋಪಡಿ ವಾಸವೇ ಕಾಯಂ) ವಾರ್ಷಿಕ ಪ್ರಶಸ್ತಿಗೆ ಕಾಂತ್ ರಾಜ್ ಹೊನ್ನೆಕೋಡಿ‌ ಆಯ್ಕೆ ಆದರೆ, (ಮಲೆನಾಡಿಗರ ನಿದ್ದೆ ಕೆಡಿಸಿದ ಜೀರುಂಡೆ ಸದ್ದು ) ಎಂಬ ವಿಷೇಶ ಅಂಕಣಕ್ಕೆ ಯೋಗೇಶ್ ರವರು ಆಯ್ಕೆ ಯಾಗಿದ್ದಾರೆ. ‌

ಈ ವರ್ಷದ ವಾರ್ಷಿಕ ಪ್ರಶಸ್ತಿಗೆ ಮಲ್ನಾಡ್ ಮೆಹಬೂಬ್ ಆಯ್ಕೆಯಾಗಿದ್ದಾರೆ. ಶಿವಕುಮಾರ್ ಹಾಸನ ಮಿತ್ರ ಇವರು ತಮ್ಮ ಪತ್ರಿಕಾರಂಗಕ್ಕೆ ಮಾಡಿದ ಸೇವೆಯನ್ನುಆಧರಿಸಿದ ನಿಮಿತ್ತ ಇವರನ್ನು ಸಹಾ ಈ ವರ್ಷದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗೆ ಭಾಜನರಾದಂತಹ ಪತ್ರಕರ್ತರಿಗೆ ಸಕಲೇಶಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಜೈಭೀಮ್ ಮಂಜು ಹಾಗೂ ಕಾರ್ಯದರ್ಶಿ ದಯಾನಂದ್ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *