ಹಾಸನ: ಅಪಘಾತಹೊಂದರಲ್ಲಿ ಸಾವನಪ್ಪಿದ ಬಾಲಕಿಯ ಅಂಗಾಂಗ ದಾನ ಮಾಡಲು ಒಪ್ಪಿದ ಪೋಷಕರ ದೃಡ ನಿರ್ದಾರ ಶ್ಲಾಘನೀಯವಾಗಿದ್ದು, ಇದರಿಂದ ಆರು ಜನರ ಪ್ರಾಣ ಉಳಿಸಿದಂತಾಗಿದೆ ಎಂದು ಹಿಮ್ಸ್ ನಿರ್ದೇಶಕರಾದ ಡಾ. ರಾಜಣ್ಣ ತಿಳಿಸಿದರು.

ನಗರದ ಹಿಮ್ಸ್ ನಿರ್ದೇಶಕರ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿವೇಕಾನಂದ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಬಾಲಕಿ ಚಂದನ ೧೩ ವರ್ಷ ಎಂಬುವಳು ಜುಲೈ ೨೩ ರಂದು ತಿಪಟೂರಿನಲ್ಲಿ ರಸ್ತೆ ಅಪಘಾತವಾಗಿದ್ದು, ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ, ಇವರ ಮೆದುಳು ನಿಷ್ಕ್ರಿಯಗೊಂಡಿದ್ದು, ಅವರ ಹೃದಯ, ಲಿವರ್, ಕಿಡ್ನಿ ಮತ್ತು ಇತರೆ ಅಂಗಾಂಗಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದುದರಿಂದ ಅವರ ತಂದೆ ತಾಯಿಗಳು ಅತ್ಯಂತ ನೋವು ಮತ್ತು ದು:ಖದ ಸಮಯದಲ್ಲಿಯೂ ಸಹ ಸ್ವಯಂ ಅಂಗಾಂಗದಾನ ಮಾಡಲು ಒಪ್ಪಿಗೆ ನೀಡಿದರು.

ಜುಲೈ ೨೭ ರಂದು ರೋಗಿಯನ್ನು ಹಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಅಂಗಾಂಗದಾನಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲಾಯಿತು.

ಸೋಮವಾರದಂದು ಬೆಳಿಗ್ಗೆ ೩.೩೦ ರಿಂದ ೬.೩೦ ತನಕ ಅಂಗಾಂಗ ಪಡೆಯುವ ಪ್ರಕ್ರಿಯೆ ನಡೆದಿರುತ್ತದೆ. ಈ ಅಂಗಾಂಗ ದಾನವು ಹಿಮ್ಸ್ ಸಂಸ್ಥೆಯಲ್ಲಿ ಹಾಗೂ ಹಾಸನ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ನಡೆದಿರುತ್ತದೆ.

ಈ ಹಿಂದೆ ಹಲವು ಬಾರಿ ಹಿಮ್ಸ್ ತಂಡವು ಪ್ರಯತ್ನ ನಡೆಸಿದ್ದರೂ ಸಫಲವಾಗಿರಲಿಲ್ಲ. ತದನಂತರ ಹಿಮ್ಸ್ ತಂಡದ ಅರಿವಳಿಕೆ ವಿಭಾಗದ ತಜ್ಞರ ಅವಿರತ ಪ್ರಯತ್ನ ಮತ್ತು ಸೊಟ್ಟೊ, ಜೀವನ ಸಾರ್ಥಕತೆ ಸಹಯೋಗದೊಂದಿಗೆ ಡಾ. ರಾಜೇಗೌಡ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದರು.

ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಮಾತ್ರ ಇದಕ್ಕೆ ಅವಕಾಶ ಹಿಮ್ಸ್ ಪಡೆದಿದೆ. ಹಿಮ್ಸ್ ಮೊದಲ ಬಾರಿಗೆ ಟ್ರಾನ್ಸ್ ಪ್ಲಾಂಟ್ ಮಾಡಿರುವುದು ರಾಜ್ಯದಲ್ಲೆ ಮೊದಲು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಪಡೆದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಿಡ್ನಿ ಮತ್ತು ಲಿವರ್ ವಿಫಲ ಆಗಿರುವ ರೋಗಿಗಳಿಗೆ ಜೋಡಣೆ ಮಾಡಲು ಅತೀ ಶೀಘ್ರದಲ್ಲಿ ಈ ಅಂಗಾಂಗಗಳನ್ನು ಕಳುಹಿಸಿಕೊಡಲಾಗುವುದು. ಇದರಿಂದಾಗಿ ಕುಮಾರಿ ಚಂದನರವರ ತಂದೆ ವಸಂತ ಕುಮಾರ್ ತಂದೆ-ತಾಯಿಗಳು ತಮ್ಮ ಮಗಳನ್ನು ಬೇರೆಯವರ ಮೂಲಕ ನೋಡಬಹುದು ಮತ್ತು ಇವರ ಈ ಉದಾರತೆಯಿಂದಾಗಿ ಅಂಗಾಂಗ ದಾನ ಪಡೆದ ಕುಟುಂಬದವರು ತಮ್ಮ ಮನೆಯಲ್ಲಿ ಹೊಸಬೆಳಕು ಕಾಣಲಿದ್ದಾರೆ.

ಈ ಮೂಲಕ ಕುಮಾರಿ. ಚಂದನ ತಂದೆ-ತಾಯಿಗಳು ಬೇರೆ ಕುಟುಂಬದವರಿಗೆ ಹೊಸಜೀವನ ಮತ್ತು ಹೊಸಬೆಳಕು ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಅಂಗಾಂಗಳನ್ನು ದಾನ ಮಾಡಿದರೇ ಮುಕ್ತಿ ಸಿಗುವುದಿಲ್ಲ ಎನ್ನುವ ಮೂಢನಂಬಿಕೆ ಜನರಲ್ಲಿ ಬೇರೊರಿದ್ದು, ಅನೇಕರು ದಾನ ಮಾಡಲು ಬರುವುದಿಲ್ಲ. ಈ ರೀತಿ ಆರ್ನನ್ ಡೊನೇಷನ್ ಎಲ್ಲರೂ ಮುಂದೆ ಬಂದರೆ ಒಬ್ಬನಿಂದ ೮ ಮಂದಿ ಉಳಿಸಬಹುದು.

ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸ್ಪಂದಿಸಬೇಕು. ೫ ಅರ್ಗನ್ ಗಳನ್ನು ದಾನ ಮಾಡಿದ ಪೋಷಕರಿಗೆ ಅವರ ಸಂಬಂದಕರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ. ಬಿ.ಸಿ. ರವಿಕುಮಾರ್, ಆಡಳಿತಾಧಿಕಾರಿ ರೇಖಾ, ಅರವಳಿಕೆ ಮುಖ್ಯಸ್ಥ ಡಾ. ಹನುಮಂತಪ್ಪ, ಡಾ. ರಾಮನಾಥ್, ರಾಘವೇಂದ್ರ ಪ್ರಸಾದ್, ಡಾ ಅನುಪಮಾ, ಡಾ. ವಿಶ್ವನಾಥ್, ಡಾ. ಆಲೇಶ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *