
ಸಕಲೇಶಪುರ : ಶಿರಾಡಿ ಘಾಟ್ ಭೂ ಕುಸಿತ ಪ್ರದೇಶಕ್ಕೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಹಿನ್ನಲೆ ಶಾಸಕರಾದ ಸಿಮೆಂಟ್ ಮಂಜುನಾಥ್ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನೆಡೆಸಿದರು.
ತಾಲೂಕು ಪಂಚಾಯತಿ ಆವರಣದಲ್ಲಿ ಸಭೆ ಕರೆದಿದ್ದ ಶಾಸಕರು, ಮಲೆನಾಡು ಭಾಗದಲ್ಲಿ ಸುರಿದ ಧಾರಕಾರ ಮಳೆಗೆ ರಸ್ತೆ, ಮನೆ ಶಾಲೆಗಳು ಸೇರಿದಂತೆ ಹತ್ತು ಹಲವು ನಷ್ಟ ಸಂಭವಿಸಿದ್ದು ಸರ್ಕಾರದಿಂದ ಸೂಕ್ತ ಪರಿಹಾರಕ್ಕೆ ಬೇಡಿಕೆ ಮಂಡಿಸಲು ಅಧಿಕಾರಿಗಳ ಸಭೆ ನೆಡೆಸಿದರು.



