
ಸಕಲೇಶಪುರ .ತಾಲ್ಲೂಕಿನ ಬೆಳಗೋಡು ಹೋಬಳಿ ದಿಣ್ಣೆಕೆರೆ-ಬಿಳಿಗಿರಿ ಗ್ರಾಮದಲ್ಲಿ ಆಗಸ್ಟ್ 11 ಸಂಜೆ ಕಾಡು ಪ್ರಾಣಿ ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದು ದಾಳಿಮಾಡಿ ಕಚ್ಚಿ ತುಂಬಾ ಗಾಯವಾಗಿರುತ್ತದೆ.
ಇದನ್ನು ಕಂಡ ಬಿಳಿಗಿರಿ ಗ್ರಾಮದ ಯುವಕರು ಕೂಡಲೇ ಅರಣ್ಯ ಸಿಬ್ಬಂದಿ ವರ್ಗದವರಿಗೆ ಕರೆ ಮಾಡಿ ಬದುಕಿಸಲು ಪ್ರಯತ್ನ ಮಾಡಿದ್ದಾರೆ.
ಅದು ಸಾವು ನೋವಿನ ಮಧ್ಯೆ ನೋವನ್ನು ಅನುಭವಿಸುತ್ತಿದ್ದ ಕಾರಣ ಜಿಲ್ಲಾ ಆನೆ ಕಾರ್ಯಪಡೆ ಸಾಗರ್ ಹಾಗೂ ಸಂಗಡಿಗರು ಇದನ್ನು ಪರಿಶೀಲನೆ ಮಾಡಿ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ನೆರೆಯ ಗ್ರಾಮವಾದ ಕೆಸಗುಲಿ ಯಲ್ಲಿ ಇದೇ ಘಟನೆ ಸಂಭವಿಸಿದ್ದು ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ಜಿಂಕೆಯು ಮೃತಪಟ್ಟಿರುತ್ತದೆ.
ಇನ್ನಾದರೂ ಬೀದಿ ನಾಯಿಗಳ ಬಗ್ಗೆ ಸೂಕ್ತ ಕ್ರಮವನ್ನು ವಹಿಸಿ ವನ್ಯಜೀವಿಗಳಿಗೆ ಬದುಕಲು ಬಿಡೋಣ ಎಂದು ಜೆಡಿಎಸ್ ಮುಖಂಡರಾದ ದಿಲೀಪ್ ಕೆಸಗುಲಿ ಹಾಗೂ ಉದಯವಾರ ಸಮಾಜ ಸೇವಕರಾದ ಮಂಜುನಾಥ್ ಅವರು ತಿಳಿಸಿದ್ದಾರೆ.


