
ಸಕಲೇಶಪುರ :- ತಾಲ್ಲೂಕು ಹೆತ್ತೂರು ಹೋಬಳಿಯ ಹಾಡ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಹೆತ್ತೂರು ಹೋಬಳಿಯ ಬೆಳಗಾರರ ಸಂಘದ ಉಪಾಧ್ಯಕ್ಷರು ಹಾಗೂ ಸಮಾಜ ಸೇವಕಿ ನೇತ್ರ ಸುರೇಶ್ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೇತ್ರ ಸುರೇಶ್ “ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಈ ಕಲಿಕಾ ಸಾಮಗ್ರಿಗಳನ್ನು ಕೊಡುತ್ತಿದ್ದೀನಿ. ಇದರ ಸದುಪಯೋಗವನ್ನು ನೀವೆಲ್ಲ ಪಡೆದುಕೊಳ್ಳುವ ಮೂಲಕ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ, ತಮ್ಮ ತಂದೆ ತಾಯಿಗೆ ಒಳ್ಳೆಯ ಹೆಸರನ್ನು ಹಾಗೂ ಓದಿದ ಸರ್ಕಾರಿ ಶಾಲೆಗೆ ಕೀರ್ತಿ ತರಬೇಕೆಂದು ಬಯಸುತ್ತೇನೆ.
ಪ್ರತಿ ವರ್ಷವೂ ಇತರ ಸರ್ಕಾರಿ ಶಾಲೆಗಳನ್ನು ಗುರುತಿಸಿ ತನ್ನ ಕೈಲಾದ ಸೇವೆಯನ್ನು ಮಾಡಬೇಕೆಂದುಕೊಂಡಿದ್ದೇನೆ. ಅದರ ಪ್ರಾರಂಭವನ್ನು ಈ ವರ್ಷದಿಂದ ಈ ಶಾಲೆಯಿಂದಾನೆ ಮಾಡುತ್ತಿದ್ದೇನೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಯಾವ ವಿಭಾಗದಲ್ಲೂ ಕಡಿಮೆ ಇಲ್ಲ ಎಂಬುದನ್ನು ಗಮನಿಸಿದ್ದೇನೆ. ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಕಲಿತಿರುವುದು. ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ತಮ್ಮಕಲಿಕಾ ಭಾವನೆಗಳನ್ನು ಮುಕ್ತವಾಗಿ ಶಿಕ್ಷಕರೊಡನೆ ಹಂಚಿಕೊಳ್ಳಲು ಅವಕಾಶ ಇರುತ್ತದೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳು ಮುಂದೆ ಇದ್ದಾರೆ.ಹೋಬಳಿಯ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಗೋಸ್ಕರ ಏನಾದರೂ ಸಹಾಯ ಬೇಕಿದ್ದರೆ ನನ್ನನ್ನು ಸಂಪರ್ಕಿಸಿ ಖಂಡಿತವಾಗಿಯೂ ನಾನು ನಮ್ಮ ಕುಟುಂಬದವರು ಕೈಲಾದಷ್ಟು ಸಹಾಯವನ್ನು ಮಾಡುತ್ತೇವೆ.ಶಿಕ್ಷಣಕ್ಕೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ.
ಸತತ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಓದಿದರೆ ಭವಿಷ್ಯದಲ್ಲಿ ಉತ್ತಮ ಸಾಧಕರಾಗಬಹುದು. ಒಟ್ಟಾರೆ ನಮ್ಮ ಹೋಬಳಿಯ ಸರ್ಕಾರಿ ಶಾಲೆಯ ಮಕ್ಕಳು ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳುವ ಮೂಲಕ ಕೀರ್ತಿ ತರುವಂತಹ ಕೆಲಸವಾಗಬೇಕು.ಎಂದರು
ಶಾಲಾ ಸಹ ಶಿಕ್ಷಕಿ ಜ್ಯೋತಿಮಣಿ ಮಾತನಾಡಿ “ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಈ ತರಹದ ಪ್ರೋತ್ಸಾಹದ ಕೊಡುವಂತಹ ಕೈಗಳು ಮುಂದೆ ಬರಬೇಕು . ಉಳ್ಳುವವರು ಕೊಡುವ ಮನಸ್ಸನ್ನು ಹೊಂದಿದರೆ ಇತರ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪ್ರೋತ್ಸಾಹದ ಜೊತೆಗೆ ಉತ್ತೇಜನ ಸಿಕ್ಕಿದಂತಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ನೇತ್ರ ಸುರೇಶ್ ಅವರ ಸಮಾಜಮುಖಿ ಕೆಲಸ ಮೆಚ್ಚುವಂಥದ್ದು. ಇವರಿಂದ ಇನ್ನೂ ಹೆಚ್ಚಿನ ಸಹಾಯವು ಸರ್ಕಾರಿ ಶಾಲೆಯ ಮಕ್ಕಳಿಗೆ ಸಿಗುವಂತಾಗಲಿ.”ಎಂದರು.
ಹೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರಾಜ್ ಮಾತನಾಡಿ ” ಈ ತರದ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ಜೊತೆಗೆ ತಮ್ಮ ತಂದೆ ತಾಯಿಗಳಿಗೂ ಕೂಡ ಉತ್ತಮ ರೀತಿಯ ಕೀರ್ತಿಯನ್ನು ತರಬೇಕು.
ನೇತ್ರ ಸುರೇಶ್ ತರಹ ಸಮಾಜ ಸೇವಕರು ಮುಂದೆ ಬಂದರೆ ಯಾವುದೇ ಸರ್ಕಾರಿ ಶಾಲೆಯ ಮಕ್ಕಳು ಜೀವನದಲ್ಲಿ ಸಾಧನೆ ಮಾಡುವುದಕ್ಕೆ ಧೈರ್ಯ ಬರುತ್ತದೆ . ಎಂದರು ನಂತರ ಮಾತನಾಡಿದ ಕರಡಿಗಾಲ ಹರೀಶ್ ” ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡುವವರು ಮುಂದೆ ಬರಬೇಕು. ನೇತ್ರ ಸುರೇಶ್ ಅವರಿಂದ ಇನ್ನಷ್ಟು ಹೆಚ್ಚಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಹಾಯ ಸಿಗುವಂತಾಗಲಿ. ” ಎಂದರು
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಸತೀಶ್,ಗ್ರಾಮಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಉಮೇಶ್,ಮಾಜಿ ಸೈನಿಕರಾದ ನಂದೀಶ್, ಕಾಫಿ ಬೆಳೆಗಾರರದ ಸುರೇಶ ಇದ್ದರು.


