
ಸಕಲೇಶಪುರ: ಹೇಮಾವತಿ ಸೇತುವೆ ಬಳಿ ಪಾದಾಚಾರಿಗಳು ತಿರುಗುವ ದಾರಿಯನ್ನು ಅಡ್ಡಗಟ್ಟಿ ವಿಕೃತಿ ಮೆರೆಯುತ್ತಿರುವ ಖಾಸಗಿ ವ್ಯಕ್ತಿಯ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಪ್ರಕರಣ ದಾಖಲು ಮಾಡಬೇಕು
ಈ ದಾರಿಯನ್ನು ಸಾರ್ವಜನಿಕರ ತಿರುಗಾಟಕ್ಕೆ ಅನುವು ಮಾಡಿಕೊಡಬೇಕು ಮತ್ತು ರಸ್ತೆ ಮಧ್ಯದಲ್ಲಿ ಅನಧಿಕೃತವಾಗಿ ಹಾಕಿರುವ ಬೋರ್ಡ್ ಅನ್ನು ಸಹ ತೆರವುಗೊಳಿಸಬೇಕು
ತೆರವುಗೊಳಿಸದೆ ಇದ್ದ ಕಾರಣ ದಲ್ಲಿ ಮಲೆನಾಡು ರಕ್ಷಣಾ ಸೇನೆಯಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದಂತಹ ಸಾಗರ್ ಜಾನಕೆರೆಯವರು ತಿಳಿಸಿದ್ದಾರೆ


