ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಇಪ್ಪತ್ತಾರು ಸೋಮವಾರದಂದು ವಿದ್ಯಾರ್ಥಿಗಳು ಆಯೋಜಿಸಿದ್ದ “ತಾಯಿಯ ಹೆಸರಲ್ಲಿ ಒಂದು ವೃಕ್ಷ ಅಭಿಯಾನ” ಎಂಬ ಕಾರ್ಯಕ್ರಮವು ಸುಸಜ್ಜಿತವಾಗಿ ನೆರೆವೇರಿತು.

ಈ ಕಾರ್ಯಕ್ರಮದ ಉದ್ದೇಶವು ಪರಿಸರ ನಾಶದಿಂದ ಪ್ರಕೃತಿಯ ವಿಕೋಪಗಳು ಹೆಚ್ಚಾಗುತ್ತಿದ್ದು, ವಿಕೋಪಗಳನ್ನು ತಡೆಗಟ್ಟಲು ಇಂತಹ ಕಾರ್ಯಕ್ರಮಗಳನ್ನು ಚಾಲ್ತಿಗೆ ತರುವುದು ಅತ್ಯಂತ ಅವಶ್ಯಕವಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಲು ಕೃಷಿ ಮಹಾವಿದ್ಯಾಲಯ ಕಾರೆಕೆರೆ ,ಹಾಸನ ಕಾಲೇಜಿನ ಡೀನ್ (ಕೃಷಿ) ರಾದ ಡಾ.ಕೆ ಎನ್ ಮುನಿಸ್ವಾಮಿಗೌಡರು ಆಗಮಿಸಿದ್ದರು.

ಈ ಕಾರ್ಯಕ್ರಮವನ್ನು ಊರಿನಲ್ಲಿರುವ ಎಲ್ಲಾ ಮಹಿಳಾಮಣಿಗಳು , ತಾಯಂದಿರರು, ಊರಿನ ಪ್ರಗತಿ ಪರ ರೈತರು, ಹಾಗೂ ಊರಿನ ಎಲ್ಲಾ ಬಾಂಧವರು ಕೂಡಿ , ಸರಕಾರಿ ಕಿರಿಯ‌ ಪ್ರಾಥಮಿಕ ಶಾಲೆ ಕೆ ಹೊಸಹಳ್ಳಿಯ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಅತ್ಯಂತ ಮಹತ್ವ ಪೂರ್ಣವಾಗಿ ನೆರವೇರಿಸಿದರು.

ಈ ಮೂಲಕ ಡಾ. ಮುನಿಸ್ವಾಮಿಗೌಡರು ನಾವು ಈಗ ನೆಟ್ಟ ಮರಗಳು ಮುಂದೊಂದು ದಿನ ಹೆಮ್ಮರವಾಗಿ ಬೆಳೆದು ಮುಂದಿನ ಪೀಳಿಗೆಗೆ ನೆರಳನ್ನು ನೀಡುತ್ತದೆ. ಹಾಗೂ ನೆರೆದಿರುವ ಚಿಕ್ಕ ಮಕ್ಕಳಿಗೂ ಕೂಡ ನೀವು ಮುಂದೆ ದೊಡ್ಡವರಾದ ನಿಮಗೆ ನೆರಳು ಬೇಕು ಎಂದರೆ ಇಂದಿನಿಂದ ಗಿಡಗಳನ್ನು ನೆಟ್ಟು ಅವಗಳಿಗೆ ನೀರೆರೆಯುವ ಮೂಲಕ ಪೋಷಣೆ ಮಾಡಬೇಕು ಬುದ್ಧಿಮಾತುಗಳನ್ನು ಹೇಳಿದರು.

ಹಾಗೂ ನೆರೆದಿರುವ ಎಲ್ಲರಿಗೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಗ್ರಾಮದ ಜನತೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಮಾಡಲಿದ್ದಾರೆ ಎಂಬ ಭರವಸೆಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ.ಶಂಕರ ಎಮ್ ಎಚ್, ಡಾ.ಪ್ರಮೋದ್ ಜಿ ,ಹಾಗೂ ರೇಖಾ ಬಿ, ಹಾಗೂ ಊರಿನ ಪ್ರಗತಿ ಪರ ರೈತರಾದ ದೀಪಕ್ , ಇವರೆಲ್ಲರ ನೇತೃತ್ವದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *