ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಮೂವತ್ತೊಂದು ಆಗಸ್ಟ್ ಶನಿವಾರದಂದು ಜೈವಿಕ ಇಂಧನದ ಪ್ರಾಮುಖ್ಯತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ ಗಿರೀಶ್ ಸೀನಿಯರ್ ಟೆಕ್ನಿಷಿಯನ್ ಜೈವಿಕ ಇಂಧನ ಉದ್ಯಾನವನ ,ಮಡೆನೂರು ಇವರು ಆಗಮಿಸಿದ್ದರು.

ಪೆಟ್ರೋಲ್,ಡಿಸೇಲ್ ಇಂತಹ ಇಂಧನಗಳು ಪರಿ‌ಸರಕ್ಕೆ ಹಾನಿಯನ್ನುಂಟು ಮಾಡುತ್ತವೆ. ಹಾಗೂ ಪರಿಸರವನ್ನು ಕಾಪಾಡಲು ಈ ಇಂಧನಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗದಿದ್ದರೂ ಅದನ್ನು ಆದಷ್ಟು ಕಡಿಮೆ ಮಾಡುವುದರಿಂದ ಪರಿಸರವನ್ನು ಹಾನಿಯಿಂದ ಕಾಪಾಡಿಕೊಳ್ಳಬಹುದು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ಗಿರೀಶ್ ಅವರು ಜೈವಿಕ ಇಂಧನ ಎಂದರೇನು,ಅದರಿಂದಾಗುವ ಉಪಯೋಗಗಳೇನು ಎಂಬುದನ್ನು ಎಲ್ಲಾ ಕೆ.ಹೊಸಹಳ್ಳಿ ಗ್ರಾಮಸ್ತರಿಗೆ ತಿಳಿಸಿದರು. ಹಾಗೂ ಜೈವಿಕ ಇಂಧನದ ಮರಗಳನ್ನು ಅವುಗಳೆಂದರೆ ಹಿಪ್ಪೆ,ಹೊಂಗೆ,ಬೇವು ಮುಂತಾದ ಇತರೆ ಮರಗಳನ್ನು ನೀಡುವ ಮೂಲಕ ಜನರನ್ನು ಗಿಡ ನೆಡುವುದಕ್ಕೆ ಪ್ರೋತ್ಸಾಹಿಸಿದರು.

ಅದಲ್ಲದೆ ಈ ಊರಿಗೆ ಇನ್ನೂರು ಗಿಡಗಳನ್ನು ನೀಡುತ್ತೇವೆ ಎಂದು ಹೇಳಿದರು. ಹಾಗೂ ಹೆಚ್ಚಿನ ಮಾಹಿತಿಗೆ ಜೈವಿಕ ಇಂಧನ ಉದ್ಯಾನವನ ಮಡೆನೂರುಗೆ ಬೇಟಿ ನೀಡಬಹುದು ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಯುತ ರಘುಕುಮಾರ್ ಅವರು ಇಂಡಿಗಳ ಬಗ್ಗೆ ಮತ್ತು ಜೈವಿಕ ಇಂಧನಗಳ ಬಗ್ಗೆ ಸುವಿಸ್ತಾರವಾಗಿ ತಿಳಿಸಿದರು. ಹಾಗೂ ಈ ಕಾರ್ಯಕ್ರಮಕ್ಕೆ ಊರಿನ ಹಿರಿಯರಾದ ಸಿದ್ದೇಗೌಡರು, ಕೃಷ್ಣೇಗೌಡ ಪಟೇಲರು,ಶ್ರೀಮತಿ ಕಾಂತಮ್ಮ,ಹಾಗೂ ಪ್ರಗತಿಪರ ರೈತರಾದ ಶ್ರೀಯುತ ದೀಪಕ್ ಅವರು ಭಾಗಿಯಾಗಿದ್ದರು

ಹೀಗೆ ಇವರೆಲ್ಲರ ಸಹಭಾಗಿತ್ವದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *