
ಸಕಲೇಶಪುರ ಶಾಸಕರಾದ ಸಿಮೆಂಟ್ ಮಂಜು ಆಗಮನದಿಂದ ಸಂತಸಗೊಂಡ ಜನ್ನಾಪುರ ಗ್ರಾಮದ ಗ್ರಾಮಸ್ಥರು ಮಹಿಳೆಯರು. ಸಿಮೆಂಟ್ ಮಂಜು ಜನ್ನಾಪುರದ ಗ್ರಾಮದ ಗ್ರಾಮದೇವತೆ ಚೌಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಪಟಾಕಿ ಸಿಡಿಸಿ ಗ್ರಾಮದ ಜನತೆ ಭಾರತ್ ಮಾತಾಕಿ ಜೈ ಎಂಬ ಜಯಘೋಷ ಕೂಗಿದರು. ನೆಚ್ಚಿನ ಶಾಸಕರಾದ ಸಿಮೆಂಟ್ ಮಂಜು ಅವರಿಗೆ ಗ್ರಾಮಸ್ಥರು ಮಹಿಳೆಯರು ಪೇಟಾ,ಶೆಲ್ಯ,ಹಾರ ಹಾಕಿ ಸನ್ಮಾನ ಮಾಡಿದರು.ಗ್ರಾಮದ ಕಾರ್ಯಕರ್ತರೊಂದಿಗೆ ಊಟ ಮಾಡಿ ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತ ಎಂದು ಸಾಬೀತುಮಾಡಿದರು.ಇದೇ ಸಂದರ್ಭದಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಶ್ರಮಿಸಿದ ರಘು ಸಕಲೇಶಪುರ ರವರಿಗೂ ಸನ್ಮಾನ ಮಾಡಲಾಯಿತು. ಗ್ರಾಮದ ಪ್ರಮುಖರಾದ ತ್ಯಾಗರಾಜು, ಬೂತ್ ಅಧ್ಯಕ್ಷ ಪಾಲಾಕ್ಷ, ರವಿ, ಅಶ್ವಥ್, ಕ್ಯಾಮನಹಳ್ಳಿ ಪಂಚಾಯಿತಿ ಸದಸ್ಯ ಸಚಿನ್,ಆಕಾಶ್, ಉಪಸ್ಥಿತಿ ಇದ್ದರು.




