
ಬೇಲೂರು : ಪುರಾತನ ಕೋಟೆ ಬಾಗಿಲು ಗಣಪತಿ ಎಂದು ಹೆಸರುವಾಸಿಯಾಗಿರುವ ವಿನಾಯಕನಿಗೆ ಇಂದು ಗಣೇಶೊತ್ಸವದ ಅಂಗವಾಗಿ ಬೆಳಗ್ಗಯಿಂದ ವೇದಬ್ರಹ್ಮ ಶ್ರೀ ಪಟ್ಟಾಭಿಶರ್ಮ ಅವರ ನೇತೃತ್ವದಲ್ಲಿ ಗಂಗಾಭಿಷೇಕ,ಪಂಚಾಮೃತಾಭಿಷೇಕ, ಪುಷ್ಪಾರ್ಚನೆ,ನಂತರ ಸಹಸ್ರ ವಿನಾಯಕನ ಅರ್ಚನೆ ನಂತರ ವಿಶೇಷ ಪೂಜೆ ಸಲ್ಲಿಸಲಾಯಿತು.
ಪ್ರತಿವರ್ಷದಂತೆ ಈ ವರ್ಷವೂ ಸಹ ಸೇವಾರ್ಥದಾರರಾದ ಅರ್ಬನ್ ಬ್ಯಾಂಕ್ ಮಾಜಿ ಉಪಾಧ್ಯಕ್ಷರಾದ ರುದ್ರ ಶೆಟ್ಟಿ ಕುಟುಂಬದವರು ವಿಶೇಷ ಪೂಜೆ ಸಲ್ಲಿಸಿ ಬಂದಂತ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.
