ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಹನ್ನೆರಡು ಸೆಪ್ಟಂಬರ್ ಗುರುವಾರದಂದು ಬೋರ್ಡೋ ಮಿಶ್ರಣ ಪದ್ದತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ.ಎಚ್.ಮಂಜುನಾಥ ಸಹಾಯಕ ಪ್ರಾಧ್ಯಾಪಕರು ಸಸ್ಯರೋಗಶಾಸ್ತ್ರ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕೃಷಿ ವಿದ್ಯಾರ್ಥಿಗಳು ಬೋರ್ಡೋ ಮಿಶ್ರಣ ತಯಾರಿಸುವುದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಹಾಗೂ ಬೋರ್ಡೋ ಮಿಶ್ರಣ ಸಿಂಪಡಿಸುವುದರಿಂದ ಆಗುವ ಅನುಕೂಲಗಳೇನು,ಮತ್ತು ಬೊರ್ಡೋ ಮಿಶ್ರಣವನ್ನು ಯಾವ ಯಾವ ರೋಗಗಳಿಗೆ ಸಿಂಪಡಿಸಿದರೆ ಉತ್ತಮ ಎಂಬುದನ್ನು ತಿಳಿಸಿದರು.

ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಡಾ ಎಚ್ ಮಂಜುನಾಥ ಸಹಾಯಕ ಪ್ರಾಧ್ಯಾಪಕರು ಸಸ್ಯರೋಗಶಾಸ್ತ್ರ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಇವರು ಬೋರ್ಡೋ ಮಿಶ್ರಣದ ಪ್ರಾಮುಖ್ಯತೆಯನ್ನು ಎಲ್ಲಾ ರೈತ ಬಾಂಧವರಿಗೆ ತಿಳಿಸಿದರು.

ಬೋರ್ಡೋ ಮಿಶ್ರಣ ತೆಂಗು,ಅಡಕೆ,ಹಾಲುಗಡ್ಡೆಗಳಲ್ಲಿ ಬರುವ ರೋಗಗಳಿಗೆ ಸಿಂಪಡಿಸಬಹುದು ಎಂದು ಹೇಳಿದರು.

ಹಾಗೂ ಈ ಕಾರ್ಯಕ್ರಮಕ್ಕೆ ಕೃಷ್ಣೇಗೌಡರು,ಶಿವೇಗೌಡರು, ರಾಜೇಗೌಡರು ಹಾಗೂ ಊರಿನ ಹಿರಿಯರು ಇವರೆಲ್ಲರ ಸಮ್ಮುಖದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿತು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *