ಸಕಲೇಶಪುರ: ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನಲೆ

ವ್ಯಕ್ತಿಯೊಬ್ಬ ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಗಾಂಜಾ ಕೇಸಿನಲ್ಲಿ ಪರ್ಮಂನೆಂಟಾಗಿ ಪೊಲೀಸರಿಗೆ ಸಿಕ್ಕಿಸಲು ಪ್ಲಾನ್ ಮಾಡಿ ತಾನೇ ಪೊಲೀಸರಿಗೆ ಸಿಕ್ಕಬಿದ್ದ ಘಟನೆ ಸಕಲೇಶಪುರದಲ್ಲಿ ನಡೆದಿದೆ.

ಥಾರ್ ಜೀಪ್ ವಾಹನದಲ್ಲಿ ಗಾಂಜಾ ತಂದು ಮಹಿಳೆಯ ಪತಿಗೆ ನೀಡಿ ಪೊಲೀಸರಿಗೆ ಮಾಹಿತಿ ನೀಡಲು ಯತ್ನಿಸಿದ್ದ ನಾಲ್ವರುಥಾರ್ ವಾಹನ ಓಡಾಟದಿಂದ ಅನುಮಾನಗೊಂಡ ಪೊಲೀಸರು ವಾಹನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣೆ ಪೊಲೀಸರು ಥಾರ್ ವಾಹನದಲ್ಲಿದ್ದ 1 ಕೆಜಿ 360 ಗ್ರಾಂ ಗಾಂಜಾ ವಶ ಪಡೆಸಿಕೊಂಡಿದ್ದಾರೆ.

ಸಕಲೇಶಪುರ ಪಟ್ಟಣದ ಹಳೇಬಸ್ಟಾಂಡ್ ಸಮೀಪ ಮದ್ಯಾಹ್ನ ಈ ಘಟನೆ ನಡೆದಿದೆ.ಅಸ್ಸಾಂ ಮೂಲದ ಮುಕ್ತಾರ್ ಅಲಿ ಎಂಬಾತನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮೂಡಿಗೆರೆ ಮೂಲದ ಮಹಮದ್ ಉಸಾಮ ಬಿನ್ ರಿಯಾಜ್ ಅಹಮದ್ಸಕಲೇಶಪುರದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮುಕ್ತಾರ್ ಅಲಿಮೂಡಿಗೆರೆಯಲ್ಲಿ ವಾಸವಿದ್ದ ಮುಕ್ತಾರ್ ಅಲಿ ಪತ್ನಿಮುಕ್ತಾರ್ ಅಲಿ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗುತ್ತಿದ್ದು

ಮೂಡಿಗೆರೆ ಮೂಲದ ಮಹಮದ್ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮುಕ್ತಾರ್ ಅಲಿಯನ್ನು ಪೊಲೀಸರು ಬಂಧಿಸುವಂತೆ ಮಾಡಲು ಫ್ಲಾನ್ ಮಾಡಿದ್ದ ಮಹಮದ್ ಹಾಗೂ ಮೂವರ ತಂಡ ಚಿಕ್ಕಮಗಳೂರು ನೋಂದಣಿಯ KA-18-P-9557 ನಂಬರ್‌ನ ಥಾರ್ ವಾಹನದಲ್ಲಿ ಗಾಂಜಾ ತಂದಿದ್ದ ನಾಲ್ವರುಮುಫ್ತಾರ್ ಅಲಿಗೆ ಗಾಂಜಾ ಕೊಟ್ಟು ಪೊಲೀಸರಿಗೆ ಮಾಹಿತಿ ನೀಡಲು ತಯಾರಿ ನಡೆಸಿದ್ದರು.

ನಾಲ್ವರು ಸಹಿತಗಾಂಜಾ ಸಮೇತ ಹಾಗೂ ಥಾರ್‌ ಜೀಪ್ ವಶಕ್ಕೆ ಪಡೆದ ಪೊಲೀಸರುಬಂಧಿತ ನಾಲ್ವರು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ಮೂಲದವರು ಎಂದು ಹೇಳಲಾಗಿದೆ

ನಾಲ್ವರನ್ನು ವಿಚಾರಣೆ ನಡೆಸುತ್ತಿರುವ ಸಕಲೇಶಪುರ ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು ಈ ಮಿಂಚಿನ ದಾಳಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಜಗದೀಶ್, ಪಿಸಿ ಗಳಾದ ಪೃಥ್ವಿ, ರೇವಣ್ಣ ,ಶ್ರೀಧರ, ಚಾಲಕ ,ರಘು, ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *