
ಹಾಸನ : ಜಾನುವಾರುಗಳ ಮೇಲೆ ದಾಳಿ ಮಾಡಿ ಗ್ರಾಮಸ್ಥರಲ್ಲಿ ಬಾರಿ ಭಯದ ವಾತವರಣ ಸೃಷ್ಠಿ ಮಾಡಿದ ಮೂರ‍್ನಾಲ್ಕು ಚಿರತೆಯಲ್ಲಿ ಒಂದು ಚಿರತೆಯನ್ನು ಅರಣ್ಯ ಇಲಾಖೆಯವರು ಇಟ್ಟ ಬೋನಿಗೆ ಸಿಕ್ಕಿಬಿದ್ದಿರುವುದು ಇಲ್ಲಿನ ಸ್ಥಳಿಯರು ಸಲ್ಪವಾದರೂ ನಿಟ್ಟುಸಿರು ಬಿಟ್ಟಿದ್ದಾರೆ.
ನಗರದ ಸಮೀಪ ಗವೇನಹಳ್ಳಿಯಲ್ಲಿರುವ ಗೆಂಡೆಕಟ್ಟೆ ಅರಣ್ಯ ದಾಮದ ಬಳಿ ಕೋಳಿ ಫಾರಂ ಪಕ್ಕದಲ್ಲಿ ಇಡಲಾಗಿದ್ದ ಬೋನಿಗೆ ಮೂರು ವರ್ಷದ ಚಿರತೆ ತಡರಾತ್ರಿ ಸೆರೆ ಸಿಕ್ಕಿದೆ.


