ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಹಾಗೂ ಬಿಟೆಕ್ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ಪೌಷ್ಟಿಕ ಕೈತೋಟದ ಮಹತ್ವದ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ರೇಖಾ ಬಿ ಇವರು ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕೃಷಿ ವಿದ್ಯಾರ್ಥಿಗಳು ಪೌಷ್ಟಿಕ ಕೈತೋಟದ ಮಹತ್ವ ಮತ್ತು ಪೌಷ್ಟಿಕ ಕೈತೋಟದ ಉಪಯೋಗಗಳೇನು ಹಾಗೂ ಪೌಷ್ಟಿಕ ಕೈತೋಟವು ಒಂದು ಕುಟುಂಬವನ್ನು ಹೇಗೆ ಸಲಹುತ್ತದೆ ಎಂಬುದನ್ನು ಅರ್ಥೈಸಿದರು.ಹಾಗೂ ಪೌಷ್ಟಿಕ ಕೈತೋಟ ಮಾಡುವ ವಿಧಾನಗಗಳನ್ನು ತಿಳಿಸಿದರು.

ನಂತರ ಸಂಪನ್ಮೂಲ ವ್ಯಕ್ತಿಗಳು ಪೌಷ್ಟಿಕ ಕೈತೋಟವೂ ಒಂದು ಕುಟುಂಬದ ಆರೋಗ್ಯವನ್ನು ಕಾಪಾಡುತ್ತದೆ. ಹಾಗೂ ಮನೆಯ ಮುಂಭಾಗದಲ್ಲಿ ಇರುವಂತಹ ಜಾಗವನ್ನು ಹಾಗೆಯೇ ಬಿಡದೆ ಆ ಜಾಗದ ಉಪಯೋಗವು ಸಾಧ್ಯವಾಗುತ್ತದೆ. ಹಾಗೂ ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರು,ಪ್ರಗತಿ ಪರ ರೈತರು,ರೈತಮಹಿಳೆಯರು,ಹಾಗೂ ಕೆ ಹೊಸಹಳ್ಳಿಯ ಎಲ್ಲಾ ಜನಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *