
.ಆಲೂರು ಸಕಲೇಶಪುರ ವಿಧಾನ ಸಭಾ ವ್ಯಾಪ್ತಿಗೆ ಬರುವ ಹಾಸನ ಜಿಲ್ಲೆ ಕಟ್ಟಾಯ ವ್ಯಾಪ್ತಿಯ ಮುಕುಂದೂರು ಮಲ್ಲೇನಹಳ್ಳಿ ಗ್ರಾಮದಲ್ಲಿ ನೆನ್ನೆ ಮಳೆ ಖಾವಿಗೂ ಮುನ್ನ ಸುಡು ಬಿಸಿಲ ಬೇಗೆಗೆ ಹೇಮಾವತಿ ಎಂಬುವವರ ಮನೆ ಆಕಸ್ಮಿಕವಾಗಿ ಹೊತ್ತಿ ಉರಿದಿದ್ದು ಸಂಪೂರ್ಣ ಕರಕಲಾಗಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.ಧಗ ಧಗನೆ ಹೊತ್ತಿ ಉರಿವ ಮನೆಯನ್ನು ಕಂಡ ಗ್ರಾಮ ಎಲ್ಲಾ ಜನರು ತಕ್ಷಣ ನೀರು ಹಾಕಿ ಪಡಬಾರದ ಪಾಡು ಪಟ್ಟಾರು ಬೆಂಕಿಯ ಕೆನ್ನಾಲಿಗೆ ತಿಳಿಗೊಳಿಸಲು ಹರಸಹಾಸಪಡಬೇಕಾಯಿತು.ಸಧ್ಯ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ನಿತ್ಯ ಕೋಲಿ ನಂಬಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬ ಇಂದು ಅಕ್ಷರಶಃ ಬೀದಿಯಲ್ಲಿ ನಿಂತಿದೆ. ಮನೆಯಲ್ಲಿದ್ದ ದವಸ ಧಾನ್ಯ, ಬಟ್ಟೆ ಬರೇ, ಕಷ್ಟಕ್ಕೇoದು ಕೊಂಡ ಒಡವೆ, ಹಣ ಎಲ್ಲವೂ ಕೊಡ ಅಗ್ನಿಯಲ್ಲಿ ಹೋಮವಾಗಿವೆ. ಅಲ್ಲದೇ ಜೀವನದಾರವಾದ ಎಲ್ಲಾ ಸರ್ಕಾರಿ ಧಾಖಲೆಗಳು ಕೊಡ ನಶಿಸಿವೆ. ಬದುಕಿತು ಬಡ ಜೀವ ಎಂದುಕೊಂಡರೆ ವಾಸಕಿದ್ದ ಒಂದು ಮನೆಯು ಇಲ್ಲದಾಗಿ ಮುಂಗಾರುಮಳೆಯಲ್ಲಿ ನೆನೆಯುವಂತಾಗಿದೆ ಜೀವನ.ಜೊತೆಗೆ ಶಾಲಾ ಪ್ರಾರಂಭವಾಗಿರುವ ಹಿನ್ನೆಲೆ ತನ್ನಿಬ್ಬರು ಮಕ್ಕಳಾದ ಭಾರತ್ ಮತ್ತು ಶ್ರಾವಣಿ ಯರ ವಿದ್ಯಭ್ಯಾಸದ ಕಥೆ ಏನೆಂಎಂಬುದೇ ಈಗಿರುವ ಬಡ ಕುಟುಂಬದ ತಾಯಿಯ ವ್ಯಥೆ.ಇಂದು ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಸ್ಥಳ ಮಹಜರು ಮಾಡಿ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ಕೊಟ್ಟರು. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಕುಟುಂಬಕ್ಕೆ ಉಟ್ಟಿರುವ ಬಟ್ಟೆಯೊಂದು ಬಿಟ್ಟು ಬೇರೇನೂ ಉಳಿದಿಲ್ಲ. ಹಾಗಾಗಿ ಮಾನವೀಯ ಮೌಲ್ಯಉಳ್ಳವರು ಸಹಾಯಸ್ತಾ ಚಾಚಿ ಬಡ ಕುಟುಂಬಕ್ಕೆ ನೇರವಾಗಬೇಕಾಗಿ ಸಾರ್ವಜನಿಕರಲ್ಲಿ ಕಳಕಳಿಯ ಮನವಿ.ಹೆಸರು – ಹೇಮಾವತಿ. ಕೆನರಾ ಬ್ಯಾಂಕ್ A/C No- 4346101002237.Mob no -7795367619


