
ಆಲೂರು : ತಾಲ್ಲೂಕಿನ ಪಾಳ್ಯ ಹೋಬಳಿಯ ರೈತ ರವಿಯವರ ಪುತ್ರ ಮಲ್ಲಿಕಾರ್ಜುನು ಇಂದು ಬೆಳಗ್ಗೆ 8ಗಂಟೆಯ ಸಮಯದಲ್ಲಿ ದನಕರುಗಳಿಗೆ ಜೋಳ ಕಟಾವು ಮಾಡುವ ಸಂದರ್ಭದಲ್ಲಿ ಒಂಟಿ ಕಾಡಾನೆ ಏಕಾಏಕಿ ದಾಳಿ ಮಾಡಲು ಬಂದಾಗ ಕುದಲೆಳೆಯ ಅಂತರದಿಂದ ಪಾರಾಗಿರುವ ಘಟನೆ ಇಂದು ನಡೆದಿದೆ.
ಪಕ್ಕೆಲುಬು ಮೂಳೆ ಮುರಿತ ,ತಲೆಯ ಭಾಗಕ್ಕೆ,ಹಾಗೂ ಕೈ ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ಹಾಸನದ ಚಾಮರಾಜೆಂದ್ರ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ .
ಗಾಯಾಳು ರೈತರ ಕುಟುಂಬಸ್ಥರು ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯರವರಿಗೆ ತಿಳಿಸಿದಾಗ ಆಸ್ಪತ್ರೆಗೆ ಭೇಟಿ ನೀಡಿ ಆನೆ ದಾಳಿಗೆ ಒಳಗಾದ ಗಾಯಾಳುವಿನ ಆರೋಗ್ಯ ವಿಚಾರಿಸಿ ಅರಣ್ಯ ಇಲಾಖೆಯವರು ಗಾಯಾಳುವಿನ ಎಲ್ಲಾ ಚಿಕಿತ್ಸೆ ವೆಚ್ಚ ಹಾಗೂ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ನೀವೆ ಹಣ ಬರಿಸಬೇಕು ಹಾಗೂ ಬರಬೇಕಾದ ಪರಿಯಾರದ ಹಣವನ್ನು ಶಿಘ್ರದಲ್ಲೆ ನೀಡಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
