
ಹಾಸನದ ಕರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸ್ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಶಿಬಿರ 2024-25ರ ಅಂಗವಾಗಿ ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರದಲ್ಲಿ ‘ಬೀಜೋಪಚಾರ ಪದ್ದತಿ ಪ್ರಾತ್ಯಕ್ಷಿಕೆ ‘ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು .
ಬೆಳೆಗಳ ಆರೋಗ್ಯಕರ ಬೆಳವಣಿಗೆಗೆ ಆರೋಗ್ಯಕರ ಬೀಜದ ಪಾತ್ರ ಬಹು ಮುಖ್ಯವಾಗಿದು ,ಬಿತ್ತಿದ ಬೀಜಗಳು ಸಮೃದ್ಧವಾಗಿ ಬೆಳೆಯಾಗಲು ಬೀಜೋಪಚಾರ ಅಗತ್ಯ .ಹಾಗಾಗಿ ವಿದ್ಯಾರ್ಥಿಗಳೂ ರೈತರಿಗೆ ವಿವಿಧ ಬೀಜೋಪಚಾರದ ವಿಧಾನಗಳನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ|| ತೋಟ ಜೋಸೆಫ್ ರಾಜು ಬೀಜ ತಂತ್ರ ಜ್ಞಾನ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ ರವರು ಆಗಮಿಸಿ ಕಾರ್ಯಕ್ರಮದಲ್ಲಿ ರೈತರನ್ನು ಕುರಿತು ಮಾತನಾಡಿದರು, ಬೀಜೋಪಚಾರದ ಮಹತ್ವ, ಉಪಯೋಗಗಳು , ವಿಧಾನಗಳು , ಬಳಸುವ ರಾಸಾಯನಿಕಗಳು ಹಾಗೂ ಅದರ ಪ್ರಮಾಣ ,ನೈಸರ್ಗಿಕ ಬಿಜಾಮೃತದ ತಯಾರಿಕೆಯಯನ್ನು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು
ಈ ಕಾರ್ಯಕ್ರಮದಲ್ಲಿ ರುದ್ರೇಶ್ ,ಕುಮಾರಣ್ಣ, ಶಾಮು ಹಾಗೂ ವೆಂಕಟೇಶ್ ರವರು ವಿದ್ಯಾರ್ಥಿಗಳಾದ ಚಂದನ , ಉನ್ನತಿ, ಶ್ರಾವ್ಯ ,ಅನುಷ ಸೇರಿ ಬೀಜೋಪಚಾರ ಪ್ರಾತ್ಯಕ್ಷಿಕೆಯನ್ನು ಮಾಡಿ ರೈತರಿಗೆ ಅರಿವು ಮೂಡಿಸಿದರು.
