ಸಕಲೇಶಪುರ :- ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿಯ ಬ್ಯಾಕರವಳ್ಳಿ ರೈಸ್ ಮಿಲ್ಲಿನ ಸುತ್ತಮುತ್ತ ಸುಮಾರು 50 ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಉಪಯೋಗಕ್ಕಾಗಿ ಗ್ರಾಮ ಪಂಚಾಯಿತಿಯಿಂದ ನಿರ್ಮಾಣಗೊಂಡಿದ್ದ ರಿಂಗ್ ಬಾವಿ ಅವೈಜ್ಞಾನಿಕವಾಗಿದ್ದು ಗ್ರಾಮ ಪಂಚಾಯಿತಿಯವರಿಂದ ಸತತವಾಗಿ ಎರಡು ಬಾರಿ ಸ್ವಚ್ಛತೆ ಮಾಡಿದ್ದರು ಕೂಡ ಕುಡಿಯಲು ಶುದ್ಧವಾದ ನೀರು ದೊರಕದಂತಹ ಪರಿಸ್ಥಿತಿ ಎದುರಾಗಿತ್ತು.

ಈ ಸಮಸ್ಯೆಯ ಬಗ್ಗೆ ಗ್ರಾಮಸ್ಥರೇ ಸೇರಿಕೊಂಡು ಬಾವಿಯ ಸ್ವಚ್ಛತೆಯನ್ನು ಮಾಡುವುದರ ಜೊತೆಗೆ ಬಾವಿಯ ಸುತ್ತ ಕಸ ಬೀಳದಂತೆ ಪರದೆಯನ್ನು ತಮ್ಮ ಸ್ವಂತ ದುಡ್ಡಿನಿಂದ ಹಾಕಿಸುವುದರರೊಂದಿಗೆ ತಮ್ಮ ಮನೆಗೆ ಸ್ವಚ್ಛವಾದ ಕುಡಿಯುವ ನೀರನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ.

ಈ ಗ್ರಾಮದ ಗ್ರಾಮಸ್ಥರು ಪದೇ ಪದೇ ಅಭಿವೃದ್ಧಿಯ ದೃಷ್ಟಿಯಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಬದಲು ತಾವೇ ಮುಂದೆ ನಿಂತು ಕೆಲಸ ಮಾಡಿ ಮಾದರಿಯಾಗಿರುವುದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಂಸೆಗೆ ಕಾರಣವಾಗಿದೆ.

ಈ ಕಾರ್ಯದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಪುಟ್ಟರಾಜು, ಹಾಗೂ ಗ್ರಾಮಸ್ಥರಾದ ಹೇಮಂತ್ ಕುಮಾರ್ ,ದರ್ಶನ್, ತೀರ್ಥೇಶ್, ದೀಕ್ಷಿತ್, ನಾಗೇಶ್,ಅಭಿ ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *