
ಹಾಸನ: ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದ ಸ್ಥಳಕ್ಕೆ ನಾಗರಹಾವೊಂದು ಮೇಲಕ್ಕೆ ಏರಿ ಕಚ್ಚಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ಹೊರ ವಲಯದ ಭುವನಹಳ್ಳಿಯಲ್ಲಿ ಮನೆಯೊಂದರಲ್ಲಿ ನಡೆದಿದೆ.
ಮೂಲತಃ ಚನ್ನರಾಯಪಟ್ಟಣ ತಾಲೂಕಿನ ತಾಲುಕಿನ ನಲ್ಲೂರು ಗ್ರಾಮದವರಾಗಿದು, ಕಳೆದ 10 ವರ್ಷ ಗಳಿಂದ ಹಾಸನದ ಭೂವನಹಳ್ಳಿ ಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.ಗುರು (ಪಪ್ಪಣಿ) ೪೦ ವರ್ಷ ಎಂಬುವರೆ ಹಾವಿನಿಂದ ಕಚ್ಚಿಸಿಕೊಂಡು ಸಾವನಪ್ಪಿದ ದುರ್ಧೇವಿ.
ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದು, ಮಲಗಲು ಮೊದಲ ಮಹಡಿಗೆ ಹೋಗಿದ್ದಾರೆ . ನಾಗರ ಹಾವು ಕಾಲಿಗೆ ಕಚ್ಚಿದರೂ ಆಗಿ ಮಲಗಿದ್ದು, ಬೆಳಿಗ್ಗೆ ೮ ಗಂಟೆ ಆದರೂ ರೂಂನ ಬಾಗಿಲು ತೆಗೆಯಲಿಲ್ಲ. ಅನುಮಾನಗೊಂಡ ಪತ್ನಿ ಬಾಗಿಲು ತೆಗೆದಾಗ ಸಾವನಪ್ಪಿರುವ ಬಗ್ಗೆ ತಿಳಿದಿದೆ.
ಕಾಲಿಗೆ ಕಚ್ಚಿರುವ ಹಾವು ಅದೆ ಕೊಠಡಿಯಲ್ಲಿ ಅವಿತುಕೊಂಡಿತ್ತು. ನಂತರ ಹಾವು ಹಿಡಿಯುವವರನ್ನು ಕರೆಯಿಸಿ ಹಿಡಿದು ಆ ಹಾವನ್ನು ರಕ್ಷಣೆ ಮಾಡಲಾಗಿದೆ.
ಇವರಿಗೆ ಇಬ್ಬರು ಮಕ್ಕಳಿದ್ದು, ಕಳೆದ ೧೦ ವರ್ಷದಿಂದ ವಾಸವಿದ್ದು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಇವರು ಶುಕ್ರವಾರ ರಾತ್ರಿ ಮದ್ಯಪಾನ ಮಾಡಿ ಬಂದಿದ್ದ ಗುರು ಅವರನ್ನು ಪತ್ನಿ ಪಕ್ಕದ ರೂಮಿನಲ್ಲಿ ಮಲಗುವಂತೆ ಹೇಳಿದ್ದರು.
ಆದರೇ ಈತನು ಈ ವೇಳೆ ಮೊದಲ ಮಹಡಿಯ ಮಂಚದ ಮೇಲೆ ಮಲಗಿದ್ದರೂ ಅವರ ಮೇಲೆರಗಿ ನಾಗರ ಹಾವು ಕಚ್ಚಿದೆ. ಮನೆಯ ಯಜಮಾನನ ಸಾವು ಕೇಳಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.


