ಹಾಸನ : ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ  ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಕೋರವಂಗಲ ಗ್ರಾಮದಲ್ಲಿ ‘ ಕೃಷಿಕ ನಿಧಿ’ ಎಂಬ ನಾಮ ಧ್ಯೇಯದಡಿ ಕೃಷಿ ಕೃಷಿ ಮಾಹಿತಿ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು.

ಈ ಅಭೂತಪೂರ್ವವಾದ  ಸಮಾರಂಭದಲ್ಲಿ ಕೃಷಿ ವಿದ್ಯಾರ್ಥಿಗಳು ಡೊಳ್ಳು ಹಾಗೂ ಚಂಡೆ ನೃತ್ಯದ ಮೂಲಕ ವಿಶೇಷ ಅತಿಥಿಗಳು ಹಾಗೂ ಗಣ್ಯರನ್ನು ಸ್ವಾಗತಿಸಿದರು.ಡಾ.ಮುನಿಸ್ವಾಮಿ ಗೌಡ ಕೆ.ಎನ್, ಡೀನ್ (ಕೃಷಿ),ಕೃಷಿ ಮಹಾವಿದ್ಯಾಲಯ ಹಾಸನ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಅವರು ಗಣ್ಯರು ಹಾಗೂ ಆಹ್ವಾನಿತರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕೃಷಿ ವಿದ್ಯಾರ್ಥಿಗಳು ನಿರ್ಮಿಸಿದ್ದ ಬೃಹತ್ ಕೃಷಿಕ ನಿಧಿ(ಕೃಷಿ ಮಾಹಿತಿ ಕೇಂದ್ರ)ಯನ್ನು  ವೀಕ್ಷಿಸಿದರು.

ನಂತರ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೃಷಿ ವಿದ್ಯಾರ್ಥಿಗಳ ಶ್ರಮ ಮತ್ತು ಶ್ರದ್ದೆಯನ್ನು ಪ್ರಶಂಶಿಸಿದರು.ಮತ್ತು ವಿದ್ಯಾರ್ಥಿಗಳೊಂದಿಗೆ ಸಹಕರಿಸುವಂತೆ ಕೋರವಂಗಲದ ಗ್ರಾಮಸ್ಥರಲ್ಲಿ ವಿನಂತಿಸಿದರು.

ನಂತರ ವೇದಿಕೆ ಮೇಲಿದ್ದ ಎಲ್ಲಾ ಗಣ್ಯರು ಮಾತನಾಡಿ ಕಾರ್ಯಕ್ರಮವನ್ನು ಸುಗಮವಾಗಿಸಿದರು.ಮಾಹಿತಿ ಕೇಂದ್ರದಲ್ಲಿದ್ದ ಕೃಷಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಕೃಷಿ ವಿದ್ಯಾರ್ಥಿಗಳು ಎಲ್ಲಾ ಗ್ರಾಮಸ್ಥರಿಗೂ ವಿವರಣೆ ನೀಡಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ  ಡಾ.ಮುನಿಸ್ವಾಮಿ ಗೌಡ ಕೆ.ಎನ್, ಡೀನ್ (ಕೃಷಿ),ಕೃಷಿ ಮಹಾವಿದ್ಯಾಲಯ ಹಾಸನ,,ಡಾ.ಗುರುಪ್ರಸಾದ್.ಆರ್ ಪ್ರಾಂಶುಪಾಲರು ಪಶು ಸಂಗೋಪನ ಪಾಲಿಟೆಕ್ನಿಕ್, ಕೋರವಂಗಲ ಗೇಟ್ , ಡಾ.ಶಶಿಕಿರಣ್ ಸಹಾಯಕ ಪ್ರಾಧ್ಯಾಪಕರು,ಕೃಷಿ ಅರ್ಥಶಾಸ್ತ್ರ ವಿಭಾಗ , ಡಾ.ಸದಾಶಿವನ ಗೌಡ, ಸಹಾಯಕ ಪ್ರಾಧ್ಯಾಪಕರು ಬೇಸಾಯ ಶಾಸ್ತ್ರ ವಿಭಾಗ, ಡಾ.ವಿನೋದಾ ಶಂಕರ್ ಸಹಾಯಕ ಪ್ರಾಧ್ಯಾಪಕರು ಕೃಷಿ ವಿಸ್ತರಣಾ ವಿಭಾಗ , ರಘುವೀರ್ ,ಸಹಾಯಕ ಪ್ರಾಧ್ಯಾಪಕರು,ಗಣಕಯಂತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ. ಯೋಗೀಶ ಕೆ.ವಿ. ವಕೀಲರು ಹಾಗೂ ಗ್ರಾ|| ಪಂ॥ ಅಧ್ಯಕ್ಷರು , ಹೊನ್ನಮ್ಮ ಗ್ರಾ|| ಪಂ|| ಉಪಾಧ್ಯಕ್ಷರು , ಕುಮಾರಸ್ವಾಮಿ ಮುಖ್ಯೋಪಾಧ್ಯರು ಸ.ಹಿ.ಪ್ರಾ.ಶಾಲೆ ಕೋರವಂಗಲ ಜಯರಾಮೇಗೌಡ ಕೆ.ಎನ್ಅಧ್ಯಕ್ಷರು, ಗ್ರಾಮ ಸ್ವರಾಜ ಸಮಿತಿ,ಕೋರವಂಗಲ , ಅರವಿಂದ್ ಕುಮಾರ್ ಹಾಗೂ ಗ್ರಾಮದ ಮುಖಂಡರು, ಸರ್ಕಾರಿ ಶಾಲೆಯ ಮಕ್ಕಳು ಹಾಗೂ ಕೋರವಂಗಲದ ಎಲ್ಲಾ ಗ್ರಾಮಸ್ಥರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *