ಬಾಳೆಹಣ್ಣಿನ ಅಂಗಾಂಶ ಕೃಷಿ ಎಂದರೇಬಾಳೆಹಣ್ಣು ವಿಶಿಷ್ಟವಾಗಿ ಸಸ್ಯೀಯವಾಗಿ ಹರಡುತ್ತದೆ; ಹೀಗಾಗಿ ಅಂಗಾಂಶ ಕೃಷಿಯು ಪ್ರಸರಣ ತಂತ್ರವಾಗಿ ರೋಗ-ಮುಕ್ತ ನೆಟ್ಟ ವಸ್ತುಗಳನ್ನು ತಯಾರಿಸಲು ದೃಢವಾದ ವಿಧಾನವನ್ನು ಒದಗಿಸುತ್ತದೆ, ಇದು ಬಾಳೆಗೆ ಸಮಗ್ರ ರೋಗ-ನಿರ್ವಹಣಾ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ಮೊದಲ ಸಾಲಿನ ರಕ್ಷಣೆಯನ್ನು ಒದಗಿಸುತ್ತದೆ.

ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ(ಆನರ್ಸ್) ಮತ್ತು ಜೈವಿಕತಂತ್ರಜ್ಞಾನದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ 2024-25ರ ಅಂಗವಾಗಿ ಬಾಳೆಹಣ್ಣಿನ ಅಂಗಾಂಶ ಕೃಷಿ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ವಿದ್ಯಾರ್ಥಿಗಳು ಅಂಗಾಂಶ ಕೃಷಿ ಬಾಳೆ ತಯಾರಿಸುವ ವಿವಿಧ ಹಂತಗಳ ಬಗ್ಗೆ ತಿಳಿಸಿದರು.ಹಾಗು ಅಂಗಾಂಶ ಕೃಷಿಯಲ್ಲಿ ಉಪಯೋಗಿಸುವ ತಾಯಿ ಸಸ್ಯದ ಭಾಗಗಳು ಯಾವೆಂದು ತಿಳಿಸಿಕೊಟ್ಟರು. ಸಾಮಾನ್ಯ ಬಾಳೆ ಮತ್ತು ಅಂಗಾಂಶ ಬಾಳೆಗೆ ಇರುವ ವ್ಯತ್ಯಾಸ ಏನು? ಮತ್ತು ಯಾವ ರೀತಿ ಅಂಗಾಂಶ ಬಾಳೆಯು ಕೀಟ ಮತ್ತು ರೋಗ ರಹಿತ ಬೆಳೆಗಳು ಎಂದು ತಿಳಿಸಿದರು.

ಅಂಗಾಂಶ ಕೃಷಿ ಬಾಳೆ ತಳಿಗಳು ಮತ್ತು ಅವುಗಳು ಸಿಗುವ ಸ್ಥಳಗಳ ಬಗ್ಗೆ ತಿಳಿದರು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ದಾ.ಗೀತಾ ಗೋವಿಂದ (ಜೈವಿಕ ತಂತ್ರಜ್ಞಾನ ವಿಭಾಗ) ರವರು ಆಗಮಿಸಿದ್ದರು. ಅವರು ಅಂಗಾಂಶ ಕೃಷಿ ಬಾಳೆ ಬಗ್ಗೆ ಸಂಕ್ಷೀಪ್ತವಾಗಿ ತಿಳಿಸಿಕೊಟ್ಟರು ಹಾಗು ಅಂಗಾಂಶ ಕೃಷಿ ಬಾಳೆಯ ಪ್ರಯೋಜನಗಳನ್ನು ತಿಳಿಸಿಕೊಟ್ಟರು.

ಕೊನೆಯಲ್ಲಿ ಆಗಮಿಸಿದ್ದ ಎಲ್ಲಾ 20 ರೈತರಿಗೂ ಅಂಗಾಂಶ ಕೃಷಿ ಬಾಳೆ ಸಸಿಗಳನ್ನು ವಿತರಿಸಲಾಯಿತು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *