
ಹಾಸನ ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಹಾಗೂ ಬಿಟೆಕ್ ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ಮಾಹಿತಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಡಾ.ಕೆ.ಮುನಿಸ್ವಾಮಿಗೌಡ ಡೀನ್ (ಕೃಷಿ) ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಹಾಗೂ ಡಾ. ಶಂಕರ್ ಎಮ್ ಎಚ್ ಕೃಷಿ ವಿಸ್ತರಣ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ,ಸಂಯೋಜಕರು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಇವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮವು ಆರಂಭಗೊಂಡಿತು.
ಹಾಗೂ ಡಾ.ವಿನೋದ ಶಂಕರ್ ನಾಯಕ್ ಸಹಸಂಯೋಜಕರು ಗ್ರಾಮೀಣ ಕೃಷಿ ಕರ್ಯಾನುಭವ ಕೆ ಹೊಸಹಳ್ಳಿ. ಹಾಗೂ ಡಾ. ಶಶಿಕಿರಣ ಕೃಷಿ ಅರ್ಥಶಾಸ್ತ್ರ ವಿಭಾಗ,ಡಾ.ಸದಾಶಿವನಗೌಡ ಎಸ್ ಎನ್ ಒ ಬೇಸಾಯಶಾಸ್ತ್ರ ವಿಭಾಗ ,ಡಾ.ಶಿವಶಂಕರ್ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ಕಂದಲಿ,ಶ್ರೀಯುತ ಚಂದ್ರೇಗೌಡರು ಮುಖ್ಯ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆ. ಹೊಸಹಳ್ಳಿ,ಡಾ.ರಘುವೀರ್ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಆಗಮಿಸಿದ್ದರು.
ಹಾಗೂ ಊರಿನ ಪ್ರಗತಿಪರ ರೈತರು,ಊರಿನ ಮುಖಂಡರು ,ಊರಿನ ಎಲ್ಲಾ ರೈತ ಮಹಿಳೆಯರು, ಹಿರಿಯರು ಎಲ್ಲರೂ ಆಗಮಿಸಿದ್ದರು .ಇವರನ್ನು ಡೊಳ್ಳು ಕುಣಿತ ಮತ್ತು ಚಂಡೆಯ ಜಗಲ್ಬಂದಿಯನ್ನು ಹಾಕುತ್ತ ಸ್ವಾಗತಿಸಲಾಯಿತು.ಮಾಹಿತಿ ಕೇಂದ್ರ “ಕೃಷಿ ಆದ್ರಿತಿ” ಎಂಬ ನಾಮ ಫಲಕವನ್ನು ಡಾ. ಮುನಿಸ್ವಾಮಿಗೌಡ ಡೀನ್ (ಕೃಷಿ) ಇವರಿಂದ ಉದ್ಘಾಟಿಸಲಾಯಿತು.
ನಂತರದಲ್ಲಿ ‘ಕೃಷಿ ಆದ್ರಿತಿ’ (ಮಾಹಿತಿ ಕೇಂದ್ರ) ವನ್ನು ಡಾ.ಮುನಿಸ್ವಾಮಿಗೌಡ ಇವರು ಪಟ್ಟಿಯನ್ನು ಕತ್ತರಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.ನಂತರದಲ್ಲಿ ಮಾಹಿತಿ ಕೇಂದ್ರಕ್ಕೆ ಒಳಗಡೆ ಪಾದರ್ಪಣೆ ಮಾಡಿದ ತಕ್ಷಣ ಊರಿನ ಬಗೆಗಿನ ಮಾಹಿತಿ ಹಾಗೂ ಜನಸಂಖ್ಯೆ ಮತ್ತು ಇತರೆ ಮಾಹಿತಿ ಹಾಕಲಾಗಿತ್ತು .
ನಂತರದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಮಾಹಿತಿಯನ್ನು ಒಳಗೊಂಡಿತ್ತು.ಹಾಗೂ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಉದ್ದೇಶನ್ನು ಒಳಗೊಂಡಿತ್ತು.ಮುಂದೆ ಸಾಗಿದಂತೆ ಮಣ್ಣು ವಿಜ್ಞಾನ ವಿಭಾಗದ ವಸ್ತು ಪ್ರದರ್ಶನ ಇಡಲಾಗಿತ್ತು .ಮಣ್ಣು ವಿಜ್ಞಾನದ ಬಗೆಗಿನ ವಿವಿಧ ವಿಷಯಗಳನ್ನು ತೋರಿಸಲಾಗಿತ್ತು.ನಂತರದಲ್ಲಿ ಬೀಜಶಾಸ್ತ್ರ ವಿಭಾಗ ಹಾಗೂ ತಳಿಗಳ ಶಾಸ್ತ್ರ ವಿಭಾಗದ ಮಾದರಿಗಳನ್ನು ಇಟ್ಟು ತೋರಿಸಲಾಗಿತ್ತು. ನಂತರದಲ್ಲಿ ಬೇಸಾಯ ಶಾಸ್ತ್ರ ವಿಭಾಗದ ಮಾದರಿಗಳನ್ನು ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ರೈತರಿಗೆ ಮನದಟ್ಟಾಗುವಂತೆ ಮಾದರಿಯನ್ನು ಮಾಡಿದ್ದರು.
ನಂತರದಲ್ಲಿ ಕೃಷಿ ಇಂಜಿನಿಯರಿಂಗ್ ವಿಭಾಗದ ಗ್ರೀನ್ ಹೌಸ್ ಅನ್ನು ನಿಜವಾಗಿಯೂ ಒಳಗಡೆಯೇ ಮಾಡಿದೆ ಅನ್ನೋ ರೀತಿಯಲ್ಲಿ ಮಾದರಿಯನ್ನು ಮಾಡಲಾಗಿತ್ತು. ನಂತರದಲ್ಲಿ ತೋಟಗಾರಿಕೆ ವಿಭಾಗ,ರೋಗಶಸ್ತ್ರ ವಿಭಾಗ , ಕೀಟಶಾಸ್ತ್ರ ವಿಭಾಗ ಮಾದರಿಗಳು ಅತ್ಯದ್ಭುತವಾಗಿ ಮಾಡಲಾಗಿತ್ತು.
ಪಶು ಸಂಗೋಪನೆ ವಿಭಾಗ , ಕೃಷಿ ಸೂಕ್ಷ್ಮ ಜೀವಶಾಸ್ತ್ರ,ಹಾಗೂ ,ನಂತರದಲ್ಲಿ ಅರ್ಥಶಾಸ್ತ್ರ ವಿಭಾಗದ ಬೋರ್ಡ್ ಗಳು ಮತ್ತು ಅದರಲ್ಲಿನ ಕೃಷಿ ಆ್ಯಪ್ ಗಳನ್ನು ರೈತರಿಗೆ ಸುಲಭವಾಗುವಂತೆ ಸಿಗುವಂತೆ ಮಾಡಲಾಗಿತ್ತು ಹಾಗು ಕೃಷಿ ವಿಸ್ತರಣ ವಿಭಾಗ ಮಾದರಿಗಳನ್ನು ಅಚ್ಚುಕಟ್ಟಾಗಿ ಹೊಂದಿಸಲಾಗಿತ್ತು .
ನಂತರದಲ್ಲಿ ಕಾರ್ಯಕ್ರಮದ ಕುರಿತು ಡಾ. ಕೆ. ಮುನಿಸ್ವಾಮಿಗೌಡ ಡೀನ್( ಕೃಷಿ) ಇವರು ಹೊಗಳಿಕೆಯ ಮಾತುಗಳನ್ನು ಆಡಿದರು.ಹಾಗೂ ಎಲ್ಲಾ ಕೃಷಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಹೊಗಳಿದರು.
ಇವರೆಲ್ಲರ ಸಮ್ಮುಖದಲ್ಲಿ ಕಾರ್ಯಕ್ರಮವು ಯಶಸ್ವಿಯಾಯಿತು.
