ಕೃಷಿಯಲ್ಲಿ ಜೈವಿಕ ಪೀಡೆನಾಶಕಗಳ ಪಾತ್ರ ಹಾಸನ: ಜೈವಿಕ ಪೀಡೆನಾಶಕಗಳೆಂದರೆ ಜೀವಿಗಳಿಂದ ಅಥವಾ ನೈಸರ್ಗಿಕವಾಗಿ ಪಡೆದ ದ್ರವ್ಯಗಳಿಂದ ಮಾಡಿದ ಪೀಡೆನಾಶಕಗಳು. ಇವು ರಾಸಾಯನಿಕ ಪೀಡೆನಾಶಕಗಳಿಗೆ ಹೋಲಿಸಿದರೆ ಹೆಚ್ಚು ಸುರಕ್ಷಿತ ಮತ್ತು ಪರಿಸರ ಸ್ನೇಹಿಯಾಗಿವೆ. ಕೃಷಿಯಲ್ಲಿ ಬೆಳೆಗಳನ್ನು ರಕ್ಷಿಸಲು ಸಹಕಾರಿಯಾಗುತ್ತದೆ. ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ(ಆನರ್ಸ್) ಮತ್ತು ಜೈವಿಕತಂತ್ರಜ್ಞಾನದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ 2024-25ರ ಅಂಗವಾಗಿ ಜೈವಿಕ ಪೀಡೆನಶಕಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ನಮ್ಮ ದೇಶದಲ್ಲಿ ಬೇಸಾಯ ಬೆಳೆಗಳಲ್ಲಿ ರೋಗ ಭಾದೆಯನ್ನು ತಪ್ಪಿಸಲು ರಾಸಾಯನಿಕ ಕೀಟನಾಶಕಗಳಿಗಾಗಿ ವರ್ಷಕ್ಕೆ 6 ಸಾವಿರ ಕೋಟಿ ರೂಪಾಯಿಗಳು ವೆಚ್ಚವಾಗುತ್ತಿದೆ. ಇವುಗಳಿಂದ ಆಗುವ ಪರಿಸರ ಮಾಲಿನ್ಯ, ಹಣದ ಖರ್ಚು, ಮಾನವ ಮತ್ತು ಪ್ರಾಣಿಗಳಲ್ಲಾಗುವ ದುಷ್ಪರಿಣಾಮಗಳನ್ನು ಅವಲೋಕಿಸಿದರೆ ಜೈವಿಕ ಕೀಟನಾಶಕಗಳಿಗೆ ಮೊರೆ ಹೋಗುವುದು ಹೆಚ್ಚು ಸೂಕ್ತವೆಂಬುವುದು ಅರಿವಾಗುತ್ತದೆ.ರಾಸಾಯನಿಕ ಮತ್ತು ಜೈವಿಕ ಪೀಡೆನಶಕಗಳ ನಡುವಿನ ವ್ಯತ್ಯಾಸವನ್ನು ತಿಳಿಸಿದರು.

ಜೈವಿಕಪೀಡೆನಾಶಕಗಳನ್ನು 3 ಮುಖ್ಯ ವರ್ಗಗಳಾಗಿ ವಿಂಗಡಿಸಬಹುದು, ಮೊದಲನೇಯದಾಗಿ ಜೀವಕೋಶ ಮೂಲ, ಸಸ್ಯಸಂರಕ್ಷಿತ ರಕ್ಷಕಗಳು ಮತ್ತು ರಾಸಾಯನಿಕ ಮೂಲ ನಂತರ ಉತ್ತಮ ಜೈವಿಕ ಪೀಡೆನಾಶಕಗಳೆಂದರೆ ಬೇವಿನ ಎಣ್ಣೆ, ಬ್ಯುವೆರಿಯಾ ಬ್ಯಾಸಿಯಾನ, ಟ್ರೈಕೊಡರ್ಮ, ಬ್ಯಾಸಿಲಸ್, ಪೈರೆತ್ರೀನ್ ಹಾಗೂ ಬೋರ್ಡೋ ಮಿಶ್ರಣವನ್ನು ಬಳಸಿಬವುದು.ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಚೆನ್ನಕೇಶವ (ರೋಗಶಾಸ್ತ್ರ ವಿಭಾಗ) ರವರು ಆಗಮಿಸಿದ್ದರು.

ಅವರು ಜೈವಿಕ ಪೀಡೆ ನಾಶಕಗಳನ್ನು ಹೇಗೆ ಬಳಸಬೇಕು, ಅವುಗಳನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು, ಅದರಿಂದ ಆಗುವ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳನ್ನು ತಿಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *