
ಸಕಲೇಶಪುರ : ತಾಲೂಕು ಇಬ್ಬಡಿ ಕೊಣ್ಣೂರು ಗ್ರಾಮದ ಸಾಹಿತಿಗಳು ಹಾಗೂ ನಿವೃತ್ತ ಶಿಕ್ಷಕರಾದ ಕೆ.ಬಿ.ಗುರುಮೂರ್ತಿ ಅವರ ಒಡಲ ದ್ವನಿ ಕಾದಂಬರಿ ವಿಮರ್ಶೆ ಕಾರ್ಯಕ್ರಮ ನವೆಂಬರ್ 1 ರಂದು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟನೆಯನ್ನು ಮಾಜಿ ಶಾಸಕರಾದ ಹೆಚ್.ಎಂ.ವಿಶ್ವನಾಥ್ ಅವರು ಭಗವಾನ್ ಬುದ್ದರಿಗೆ ಕ್ಯಾಂಡಲ್ ಹಚ್ಚುವ ಮೂಲಕ ಉದ್ಘಾಟಿಸಿದರು.
ಪುಸ್ತಕ ವಿಮರ್ಶೆಯನ್ನು ಹಾಸನ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಮಂಜಯ್ಯ ಅವರು ಮಾಡಿದರು .
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಶಾರದಾ ಗುರುಮೂರ್ತಿ, ಸಂವಿಧಾನ ಓದು ಜಿಲ್ಲಾ ಸಂಘಟಕರಾದ ರಾಜು ಗೊರೂರ್,ದಸಂಸ ಜಿಲ್ಲಾ ಸಂಚಾಲಕರಾದ ರಾಜಶೇಖರ್, ಮಾಜಿ ಪುರಸಭೆ ಅದ್ಯಕ್ಷ ಕಾಡಪ್ಪ, ಮಾಜಿ ಸದಸ್ಯ ನಿರ್ವಾಣಯ್ಯ, ನಿವೃತ್ತ ಶಿಕ್ಷಕ ಕೆ.ಬಿ.ಬೈರಯ್ಯ, ಒಡಲ ದ್ವನಿ ಕಾದಂಬರಿಯ ರಚನಾಕಾರ ಕೆ.ಬಿ.ಗುರುಮೂರ್ತಿ, ಇತರರು ಇದ್ದರು.



