ಸಕಲೇಶಪುರ : ದಿನಾಂಕ 08. 11. 2024 ರಂದು ಲಯನ್ಸ ಭವನದಲ್ಲಿ ನಡೆದ ದೀಪಾವಳಿ ವಿಶೇಷ ಹಾಗೂ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಂಗವಾಗಿ ಭಾರತ ಸೇವಾದಳ ಜಿಲ್ಲಾಧ್ಯಕ್ಷರು ಹಾಗೂ ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಕೇಂದ್ರ ಸಮಿತಿ ಬೆಂಗಳೂರು ಎಂಕೆ ಕಮಲ್ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸೇವಾ ಮನೋಭಾವನೆಯ ಬಗ್ಗೆ ಉತ್ತಮವಾಗಿರುವ ಮಾತುಗಳನ್ನು ಆಡಿದರು .

ಇವರ ಭಾಗವಹಿಸುವಿಕೆ ಮತ್ತು ಇವರ ಮುಖ್ಯ ಅತಿಥಿಗಳ ಭಾಷಣವನ್ನು ಕೇಳಿದ ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಮತ್ತು ಲಯನ್ಸ್ ಕ್ಲಬ್ ನ ಎಲ್ಲ ಸದಸ್ಯರು ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ. ಮತ್ತು ಭಾರತಸೇವಾ ದಳದ ಬಗ್ಗೆ ಉತ್ತಮವಾದ ಅಭಿಪ್ರಾಯವನ್ನು ಸಹ ತಿಳಿಸಿರುತ್ತಾರೆ.

ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿಯ ಕೋಶಾಧ್ಯಕ್ಷರಾದ ಜಿ ಆರ್ ಶ್ರೀನಿವಾಸ್ ರವರು ಮತ್ತು ಭಾರತ ಸೇವಾ ದಳದ ಅಜೀವ ಸದಸ್ಯರಾದ ಬಾಲು ರವರು ಸಹ ಭಾಗವಹಿಸಿದ್ದರು

ಈ ಒಂದು ಕಾರ್ಯಕ್ರಮಕ್ಕೆ ವಿಶೇಷವಾಗಿ ಮಾನ್ಯ ಪ್ರಧಾನ ಕಾರ್ಯದರ್ಶಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಸಕಲೇಶಪುರದ ಲಯನ್ಸ್ ಕ್ಲಬ್ ನ ಅಧ್ಯಕ್ಷರು ಹಾಗೂ ಭಾರತ ಸೇವಾ ದಳದ ತಾಲೂಕು ಸಮಿತಿಯ ಸಕಲೇಶಪುರದ ಉಪಾಧ್ಯಕ್ಷರು ಆದಂತಹ ಕೃಷ್ಣಪ್ಪ ಪೂಜಾರ್ ರವರಿಗೆ ವಿಶೇಷ ಅಭಿನಂದನೆಗಳನ್ನು ಭಾರತ ಸೇವಾದಳದ ಪರವಾಗಿ ಸಲ್ಲಿಸುತ್ತಿದ್ದೇವೆ.

ಜೈಹಿಂದ್ ಧನ್ಯವಾದಗಳು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *