ಸಕಲೇಶಪುರ: ಇಲ್ಲಿನ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ‌ ವಸತಿ ಶಾಲೆಯಲ್ಲಿ ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಮಾದಕದ್ರವ್ಯ ವ್ಯಸನ ಮತ್ತು ಪೋಕ್ಸೋ‌ಕಾಯ್ದೆ ಯ ಅರಿವು ಎಂಬ ವಿಷಯದ ಕುರಿತು ಮಾತನಾಡಿದ ಸಕಲೇಶಪುರ ವೃತ್ತ‌ನಿರೀಕ್ಷಕರಾದ ನಿರಂಜನ ರವರು ಮಾದಕದ್ರವ್ಯ ಹೆಸರೇ ಹೇಳುವಂತೆ ಮತ್ತು ತರುತ್ತದೆ ಮತ್ತದು‌ಕೆಟ್ಟ ನಡತೆಗಳಿಗೆ ಕಾರಣವಾಗಿ ಸಮಾಜದ ಸ್ವಾಸ್ಥ್ಯ ಕ್ಕೆ ಅಪಾಯ ಒಡ್ಡುತ್ತದೆ.

ಹಾಗಾಗಿ ಎಲ್ಲರೂ ಮಾದಕವ್ಯಸನದಿಂದ‌ ದೂರ ಇದ್ದು ತಮ್ಮನ್ನು ಕಾಪಾಡಿಕೊಳ್ಳಬೇಕು ಎಂದರು

ಪೋಕ್ಸೋ ಕಾಯ್ದೆಯು ಒಳಗೊಂಡಿರುವ ಅಂಶಗಳನ್ನು ವಿವರವಾಗಿ ತಿಳಿಸಿ ತಮ್ಮನ್ನು ತಾವು ಸಂರಕ್ಷಣೆ ಮಾಡಿಕೊಳ್ಳುವ ಬಗೆ ಹೇಗೆ ಮತ್ತು ಕಾಯ್ದೆಯ ನಿಯಮ ಉಲ್ಲಂಘಿಸಿದರೆ ಆಗುವ ಪರಿಣಾಮಗಳೇನು ಎಂದು ವಿಷದವಾಗಿ ವಿವರಿಸಿದರು

ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸದಾಶಿವ ತಿಪ್ಪಾರೆಡ್ಡಿಯವರು ಸೈಬರ್ ಕ್ರೈಮ್ ಎಂದರೆ ಏನು ಮತ್ತದರ ರೀತಿ ಹೇಗೆಲ್ಲಾ ಇರುತ್ತದೆ ಎಂದು ಸೈಬರ್ ಕ್ರೈಂ ಬಗೆಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶತೇಂದ್ರಕುಮಾರ್,ಶಿಕ್ಷಕರಾದ ಸುಷ್ಮಾ ಶೆಟ್ಟಿ,ನವೀನ್,ಅಭಿಷೇಕ್, ಸಾಗರ್,ಬೀಬಿ ಫಾತಿಮಾ‌ರವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *