ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಹೊಂಗಡ ಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಕನ ಮನೆ ಜಲಪಾತ ವಿಕ್ಷಣಾ ಗೋಪುರ ಕಾಮಗಾರಿಯನ್ನು ಪರಿಶೀಲನೆ ಮಾಡಿದ ಸಕಲೇಶಪುರ ಆಲೂರು ಕಟ್ಟಾಯ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು .ಪ್ರವಾಸೋದ್ಯಮ ಇಲಾಖೆಯಿಂದ ಈ ಹಿಂದೆ ಹಣ ಮಂಜೂರಾಗಿತ್ತು ಕಾಮಗಾರಿ ಕಳಪೆಯಾಗಿದೆ ಎಂದು ನಿಲ್ಲಿಸಿದ ಕೆಲಸವನ್ನು ಇಂದು ಸರ್ವೇ ಇಲಾಖೆ ಹಾಗೂ ಅರಣ್ಯ ಇಲಾಖೆ ಯವರಿಂದ ಜಂಟಿ ಸರ್ವೆ ನಡೆಸಿದರು . ನಿಲ್ಲಿಸಲಾಗಿದ್ದ ಕೆಲಸವನ್ನು ಇಂದು ಸಿಮೆಂಟ್ ಮಂಜು ವೀಕ್ಷಿಸಿ ಮಾತನಾಡಿದ ಶಾಸಕರು ವೀಕ್ಷಣಾ ಗೋಪುರ ಕಾಮಗಾರಿ ಅವೈಜ್ಞಾನಿಕವಾಗಿದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ಮಾಡಿ ಸರಿಪಡಿಸುವಂತೆ ಹೇಳುತ್ತೇನೆ ಎಂದರು.ಈ ಸಂದರ್ಭದಲ್ಲಿ ಯಸಳೂರು ವಲಯ ಅರಣ್ಯ ಅಧಿಕಾರಿ ಜಗದೀಶ್ ಹಾಗೂ ವಳಲಹಳ್ಳಿ ಅಶ್ವಥ್ ಬಾಚಹಳ್ಳಿ ಪ್ರದೀಪ್ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *