
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆತ್ತೂರು ಮತ್ತು ಉಚ್ಚಂಗಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಬೈಲು, ಹಳ್ಳಿಯೂರು, ಕರಗೂರಿಗೆ ಸಂಪರ್ಕಿಸುವ ರಸ್ತೆಯ ಭೂಮಿ ಪೂಜೆಯನ್ನು ಸಕಲೇಶಪುರ ಆಲೂರು ಕಟ್ಟಾಯ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುನಾಥ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಹೆತ್ತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ನಾಗರಾಜು ಹೆಚ್,ಎಸ್, ಹಳ್ಳಿಬೈಲು ಹಾಗೂ ಉಚ್ಚಂಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಧನಲಕ್ಷ್ಮಿ ಅವರು ಹಾಜರಿದ್ದರು, ಹಾಗೂ ಹೆತ್ತೂರು ಮತ್ತು ಕರಗುರು ಗ್ರಾಮ ಪಂಚಾಯಿತಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಹಳ್ಳಿ ಬಯಲು, ಹಳ್ಳಿಯೂರು, ಕರಗೂರು, ಹೆತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
