ಹೈದರಾಬಾದ್: ಪುಷ್ಪ 2 ಮೂವಿಯ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್​ನಲ್ಲಿ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆ ಪ್ರಾಣ ಬಿಟ್ಟಿದ್ದಳು. ಈ ಘಟನೆಗೆ ಸಂಬಂಧಪಟ್ಟಂತೆ ಇದೀಗ ಹೈದರಾಬಾದ್​ನ ಚಿಕ್ಕಡಪಲ್ಲಿ ಪೊಲೀಸರು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಾರೆ.

ಪೊಲೀಸರು ಬಂಧಿಸಲೆಂದು ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಬಂದಾಗ ಅವರ ಕುಟುಂಬಸ್ಥರು ಎಲ್ಲರೂ ಸೇರಿದ್ದರು. ಅಲ್ಲು ಅರ್ಜುನ್ ಅವರ ತಂದೆ, ಪತ್ನಿ ಹಾಗೂ ಸಹೋದರ ಸೇರಿದಂತೆ ಇನ್ನಿತರರು ಸ್ಥಳದಲ್ಲಿ ಇದ್ದರು. ಈ ವೇಳೆ ತಮ್ಮ ಕಾರಿನಲ್ಲಿ ಬರಬಹುದು ಎಂದು ಅಲ್ಲು ಅರ್ಜುನ್ ಅವರು ಮನವಿ ಮಾಡಿದರು. ಆದರೆ ಪೊಲೀಸರು ಅದಕ್ಕೆ ಸಮ್ಮತಿಸದೇ ಪೊಲೀಸ್ ಕಾರಿನಲ್ಲೇ ಬರಬೇಕೆಂದು ಹೇಳಿದರು. ಹೀಗಾಗಿ ಅಲ್ಲು ಅರ್ಜುನ್ ಅವರು ಪೊಲೀಸ್ ಕಾರಿನಲ್ಲೇ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *