
ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರಿಯೂರು ಗ್ರಾಮದ ಲೋಲಾಕ್ಷಿ ವೀರೇಶ್ ಅವರ ಮನೆಯ ಎಮ್ಮೆಯು 7 ದಿನಗಳ ಹಿಂದೆ ಗಂಡು ಕರುವಿಗೆ ಜನ್ಮ ನೀಡಿತ್ತು.
ತಡರಾತ್ರಿಯ ಸಮಯದಲ್ಲಿ ಆ ಎಮ್ಮೆಯ ಗರ್ಭಕೋಶ ಹೊರಗಡೆ ಬಂದಿದೆ ಬೆಳಗ್ಗೆ ವಿಷಯವನ್ನು ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಶುಸಂಗೋಪನೆ ಸೂಪರ್ವೈಸರ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಕೂಡಲೆ ಸ್ಥಳಕ್ಕೆ ಬಂದ ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಶುಸಂಗೋಪನೆ ಸೂಪರ್ವೈಸರ್ ಕುಮಾರ್ ನಾಯಕ್ ಮಾಲೀಕರಿಗೆ ಧೈರ್ಯ ಹೇಳಿ ನೀವು ಎಷ್ಟು ರಾತ್ರಿಗೆ ಹೇಳಿದರು ಬರುತ್ತೇನೆ ಯಾಕೆ ನೀವು ರಾತ್ರಿಯೆ ಹೇಳಲಿಲ್ಲ ಎಂದು ಎಮ್ಮೆಗೆ ಚುಚ್ಚುಮದ್ದು ನೀಡಿ ಸತತವಾಗಿ 2 ಗಂಟೆ ಹರಸಹಾಸ ಪಟ್ಟು ಗರ್ಭಕೋಶವನ್ನು ಒಳಗಡೆ ಕೂರಿಸಿ ಎಮ್ಮೆಯ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ.
ಇವರ ಕೆಲಸಕ್ಕೆ ಮಾಲೀಕರಾದ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ವಳಲಹಳ್ಳಿ ವೀರೇಶ್ ಹಾಗೂ ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ.


