
ಸಕಲೇಶಪುರ: ನೆನ್ನೆ ರಾತ್ರಿ ತಾಲೂಕಿನಾದ್ಯಾಂತ ಸುರಿದ ಗುಡುಗು ಸಹಿತ ಭಾರಿ ಮಳೆಯಿಂದಾಗಿ ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದ ದಿವ್ಯ ಕಿಶೋರ್ ಹಾಗೂ ನಿರ್ವಾಣಯ್ಯ ಎಂಬುವವರ ಮನೆಯ ಮೇಲ್ಬಾಗದ ಶೀಟ್ಗಳು ಗಾಳಿಗೆ ಹಾರಿ ಹೋಗಿದ್ದು ಮನೆಯಲ್ಲಿದ್ದ ಬೀರು ಟೀವಿ ಬಟ್ಟೆಗಳು ಹಾಗೂ ಇತರೆ ವಸ್ತುಗಳು ಗಾಳಿಗೆ ಹಾರಿಬಿದ್ದಿದ್ದು ಸಾಕಷ್ಟು ನಷ್ಟ ಸಂಭವಿಸಿದ್ದು ಸಂಬಂದ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕಾಗಿದೆ.
