
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದಂತ ಐದು ಗ್ಯಾರಂಟಿಗಳನ್ನು ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ ಜಾರಿಯ ಘೋಷಣೆ ಮಾಡಲಾಗಿತ್ತು. ಈ ಬೆನ್ನಲ್ಲೇ ಈಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಲಾಬಿ ತೀವ್ರಗೊಂಡಿದೆ.ಹಲವು ಸಚಿವರು ತಮಗೆ ಈ ಜಿಲ್ಲೆಯ ಹೊಣೆಗಾರಿಕೆ ನೀಡುವಂತೆ ಸಿಎಂ ಸಿದ್ಧರಾಮಯ್ಯ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಆ ಜಿಲ್ಲೆಯ ಉಸ್ತುವಾರಿ ಸ್ಥಾನ ಪಡೆಯುವುದಕ್ಕಾಗಿ ಪೈಪೋಟಿಯನ್ನು ತೆರೆ ಮರೆಯಲ್ಲಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಈಗಾಗಲೆ ಕೆಲ ಸಚಿವರು ತಮಗೆ ಈ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಬೇಕು ಎಂಬುದಾಗಿಯೇ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಆದ್ರೇ ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಸ್ಥಾನ ನೀಡಲಾಗುತ್ತದೆ ಎಂಬುದೇ ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಸಂಭವನೀಯ ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನದ ಪಟ್ಟಿ ನಿಮ್ಮ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಅದು ಅಧಿಕೃತವಾಗಿ ಆದೇಶದ ಮೂಲಕ ಹೊರ ಬೀಳುವುದು ಮಾತ್ರ ಬಾಕಿ ಇದೆ. ಆ ಪಟ್ಟಿ ಕೆಳಗಿದೆ ಓದಿ.ಹೀಗಿದೆ ಸಂಭವನೀಯ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಬೆಂಗಳೂರು ನಗರ – ಕೆಜೆ ಜಾರ್ಜ್ಬೆಂಗಳೂರು ಗ್ರಾಮಾಂತರ- ರಾಮಲಿಂಗಾ ರೆಡ್ಡಿಕೋಲಾರ – ಕೆ ಎಚ್ ಮುನಿಯಪ್ಪಚಿಕ್ಕಬಳ್ಳಾಪುರ- ಡಾ ಎಮ್ ಸಿ ಸುಧಾಕರರಾಮನಗರ – ಡಿ ಕೆ ಶಿವಕುಮಾರಮಂಡ್ಯ- ಚೆಲುವರಾಯ ಸ್ವಾಮಿಮೈಸೂರು – ಡಾ.ಎಚ್ ಸಿ ಮಹದೇವಪ್ಪಚಾಮರಾಜನಗರ – ದಿನೇಶ್ ಗುಂಡೂರಾವ್ಕೊಡಗು – ವೆಂಕಟೇಶ್ದಕ್ಷಿಣಕನ್ನಡ – ಕೃಷ್ಣ ಬೈರೇಗೌಡಉಡುಪಿ- ಡಾ ಜಿ ಪರಮೇಶ್ವರಉತ್ತರ ಕನ್ನಡ- ಮಂಕಾಲ್ ವೈದ್ಯಧಾರವಾಡ- ಸಂತೋಷ್ ಲಾಡ್ಬೆಳಗಾವಿ- ಸತೀಶ್ ಜಾರಕಿಹೊಳಿಬೀದರ್- ರಹೀಮ್ ಖಾನ್ಕಲಬುರ್ಗಿ- ಶರಣ ಪ್ರಕಾಶ್ ಪಾಟೀಲ್ವಿಜಯಪುರ- ಎಂ ಬಿ ಪಾಟೀಲ್ಬಳ್ಳಾರಿ- ನಾಗೇಂದ್ರಗದಗ- ಎಚ್ ಕೆ ಪಾಟೀಲ್ಹಾವೇರಿ – ಬಿ ಝಡ್ ಝಮೀರ್ ಅಹ್ಮದ್ ಖಾನ್ಕೊಪ್ಪಳ- ಶಿವರಾಜ್ ತಂಗಡಗಿಯಾದಗಿರಿ – ಶರಣಪ್ಪಬಸಪ್ಪ ದರ್ಶಣಾಪುರಬಾಗಲಕೋಟೆ- ಶೀವನಾಂದ ಪಾಟೀಲ್ವಿಜಯನಗರ- ಲಕ್ಷ್ಮೀ ಹೆಬ್ಬಾಳ್ಕರ್ತುಮಕೂರು- ಕೆ ಎನ್ ರಾಜಣ್ಣಚಿತ್ರದುರ್ಗ- ಡಿ ಸುಧಾಕರಶಿವಮೊಗ್ಗ- ಮಧು ಬಂಗಾರಪ್ಪಹಾಸನ – ಈಶ್ವರ್ ಖಂಡ್ರೆಚಿಕ್ಕಮಗಳೂರು – ಪ್ರಿಯಾಂಕ್ ಖರ್ಗೆದಾವಣಗೆರೆ – ಎಸ್ ಎಸ್ ಮಲ್ಲಿಕಾರ್ಜುನರಾಯಚೂರು – ಎನ್ ಎಸ್ ಬೋಸ್ ರಾಜು
