
ಸಕಲೇಶಪುರ : ಜೂನ್ 5 ಪರಿಸರ ದಿನಾಚರಣೆಯ ನಿಮಿತ್ತ ನಮ್ಮ ಸಂಘಟನೆ ಉದ್ಘಾಟನೆಯ ದಿನದಂದು *ನಾಡೋಜ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ರವರು* ನಮಗೆ ನೀಡಿದ ಆಲದ ಮರದ ಸಸಿಯನ್ನು ಇಂದು ಎಎಸ್ಪಿ ಸಾಹೇಬ್ರು ಮಿಥುನ್ ರವರ ನೇತೃತ್ವದಲ್ಲಿ ಸಕಲೇಶಪುರದ ಉಪ ಅಧೀಕ್ಷಕರ ಕಛೇರಿ ಬಳಿ ನೆಟ್ಟು ನೀರೆರೆಯಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಿಥುನ್ ಸರ್ ರವರು “ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತ ಆಗಬಾರದು, ಪ್ರಕೃತಿಯ ಸಮತೋಲನದಲ್ಲಿ ಪ್ರತಿಯೊಂದು ಜೀವರಾಶಿಗಳು ಪ್ರಕೃತಿಯನ್ನು ಅವಲಂಬಿಸಿದೆ ಪ್ರಕೃತಿಯನ್ನು ನಾವು ಕಾಪಾಡಬೇಕು” ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ, ಎ.ಎಸ್ಪಿ ಮಿಥುನ್ ಸರ್, ಗ್ರಾಮಾಂತರ ಎಸ್.ಐ ಖತೀಜ ಮೇಡಂ, ನಂದೀಶ್ ರವರು, ರಾಜ್ಯ ಯುವ ಘಟಕದ ಅಧ್ಯಕ್ಷ ಕೃತಿ ವರ್ಮ ರವರು, ರಾಜ್ಯ ಸಂಘಟನಾ ಕಾರ್ಯದರ್ಶಿ ಅಜಿತ್ ಕುಮಾರ್, ರಾಜ್ಯ ಉಸ್ತುವಾರಿ ವಸಂತ್ ರವರು, ತಾಲ್ಲೂಕು ಉಪಾಧ್ಯಕ್ಷ ತೇಜೇಶ್ ಸುಳ್ಳಕ್ಕಿ ರವರು, ತಾಲ್ಲೂಕು ಉಸ್ತುವಾರಿ ಚಂದ್ರಶೇಖರ್ ಸುಳ್ಳಕ್ಕಿ, ಆರಕ್ಷಕ ಸಿಬ್ಬಂದಿ ವರ್ಗದವರು ಮುಂತಾದವರು ಹಾಜರಿದ್ದರು.


