
ಹಾಸನ : ರಸ್ತೆ ಅಪಘಾತದಲ್ಲಿ ತೀವು ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯೋರ್ವರ ಅಂಗಾಂಗವನ್ನು ದಾನ ಮಾಡುವ ಮೂಲಕ ಆಕೆಯ ಪೋಷಕರು ನೋವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ.
ಹೊನ್ನಶೆಟ್ಟಿಹಳ್ಳಿ ನಿವಾಸಿಯಾದ ಮಂಜೇಗೌಡರವರ ಪತ್ನಿಯಾದ ರಮ್ಯ ಹೆಚ್.ಎಸ್.(28) ರವರು ದಿನಾಂಕ: 09.01.2025ರಂದು ಗಂಡ ಮಂಜೇಗೌಡರ ಜೊತೆಯಲ್ಲಿ ಬೈಕ್‌ನಲ್ಲಿ ಹಿರಿಸಾವೆ ಹೋಬಳಿ ಕಾವಲುಬಾರೆ ಗ್ರಾಮದಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಬೇರೊಂದು ಬೈಕ್ ಡಿಕ್ಕಿ ಹೊಡೆದು ತಲೆಗೆ ತೀವು ಗಾಯವಾಗಿತ್ತು.
ತಕ್ಷಣ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಗಾಯಾಳು ರಮ್ಯ ಹೆಚ್. ಎಸ್ ರವರನ್ನು ಪರೀಕ್ಷಿಸಿದ ನರರೋಗ ತಜ್ಞರಾದ ಡಾ।। ಗುರುಪ್ರಸಾದ್‌ರವರ ತಂಡವು ಅವರ ಮೆದುಳು ನಿಷ್ಕ್ರಿಯವಾಗಿರುವುದನ್ನು ಖಚಿತ ಪಡಿಸಿದರು.
ಇದಾದ ನಂತರ ರಮ್ಯರವರ ಕುಟುಂಬದವರು ಆದಿಚುಂಚನಗಿರಿ ಆಸ್ಪತ್ರೆಗೆ ಅಂಗಾಂಗಳನ್ನು ದಾನಮಾಡಲು ನಿರ್ಧರಿಸಿದರು.
ಆಸ್ಪತ್ರೆಯ ಮುಖ್ಯಸ್ಥರಾದ ಡಾ| ಕೆ.ಎಂ.ಶಿವಕುಮಾರ್‌ರವರ ಮಾಗದರ್ಶನದಂತೆ ನುರಿತ ತಜ್ಞರುಗಳ ಸಹಾಯದಿಂದ ಅಂಗಾಂಗಗನ್ನು ಬೇರ್ಪಡಿಸಿ, ಆದಿಚುಂಚನಗಿರಿಯ ಕಿಡ್ನಿ ತಜ್ಞರಾದ ಡಾ॥ ನರೇಂದ್ರ, ಡಾ।।ಅನಿಲ್ ಮತ್ತು ಡಾ||ನಂದೀಶ್ ವಿ ರವರ ಸಹಕಾರದಿಂದ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿದ್ದಾರೆ ಮತ್ತು ಇದೇ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕಣ್ಣುಗಳನ್ನು ಅಂಗಾಂಗ ಕಸಿ ಮಾಡಿದ್ದಾರೆ. ಇದರ ಜೊತೆಗೆ ಹೃದಯ ಮತ್ತು ಹೃದಯನಾಳನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಮತ್ತೊಂದು ಕಿಡ್ನಿಯನ್ನು ಜೆಎಸ್‌ಎಸ್ ಆಸ್ಪತ್ರೆ, ಮೈಸೂರು, ಯಕೃತ್‌ನ್ನು (ಲಿವರ್) ಬಿ.ಜಿ.ಎಸ್. ಅಪೊಲೋ ಆಸ್ಪತ್ರೆ ಬೆಂಗಳೂರು ಇಲ್ಲಿಗೆ ಜೀರೋ ಟ್ರಾಫಿಕ್ ಮೂಲಕ ರವಾನಿಸಲಾಗಿದ್ದು ಅಂಗಾಂಗಗಳನ್ನು ದಾನ ಮಾಡಿದ ಗ್ರಾಮೀಣ ಭಾಗದ ರಮ್ಯಹೆಚ್.ಎಸ್‌ರವರ ಕುಂಟುಂಬಸ್ಥರು ಸಮಾಜಕ್ಕೆ ಮಾದರಿಯಾಗಿದ್ದಾರೆ.
