ಸಕಲೇಶಪುರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕಳೆದ ಐದಾರು ತಿಂಗಳ ಹಿಂದೆ ಯುವ ಕಾಂಗ್ರೆಸ್ ಚುನಾವಣೆಯನ್ನು ಘೋಷಣೆ ಮಾಡಿದ್ದು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಅದರ ಫಲಿತಾಂಶ ದಿನಾಂಕ 07/02/2025 ರಂದು ಪ್ರಕಟವಾಗಿದ್ದು ಈ ಚುನಾವಣೆಯಲ್ಲಿ ಚುನಾಯಿತರಾದ ಧರ್ಮರಾಜ್ ಹೆನ್ಲಿ ರವರು ಸಕಲೇಶಪುರ ಆಲೂರು ಕಟ್ಟಯಾ ವಿಧಾನಸಭಾ ಕ್ಷೇತ್ರದ ಅಸೆಂಬ್ಲಿ ಅಧ್ಯಕ್ಷರಾಗಿ, ಮತ್ತು ಸಕಲೇಶಪುರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಹಮ್ಮದ್ ಶಬೀರ್, ಹಾಗೂ ಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಂದ್ರಶೇಖರ್ ತೊರೆಹಳ್ಳಿ, ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಕೆ ಆರ್ ಮನೋಜ್ ಅಗ್ನಿ, ಇವರು ಚುನಾಯಿತರಾಗಿದ್ದು ಇದರ ಪ್ರಯುಕ್ತ ಇಂದು ಹೊಳೆಮಲ್ಲೇಶ್ವರ ದೇವಸ್ಥಾನದಿಂದ ಹಳೆ ಬಸ್ ಸ್ಟ್ಯಾಂಡ್ ವರೆಗೂ ಯುವ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ರೋಡ್ ಶೋ ಮಾಡುವುದರ ಮೂಲಕ ಪಟಾಕಿ ಸಿಡಿಸಿ ಅತ್ಯಂತ ವಿಜ್ರಂಬಣೆಯಿಂದ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಹಾನುಬಾಳು ಭಾಸ್ಕರ, ಕೆಪಿಸಿಸಿ ಸದಸ್ಯರಾದ ಎಡೆಹಳ್ಳಿ ಆರ್ ಮಂಜುನಾಥ್, ಅಲ್ಪಸಂಖ್ಯಾತ ಮುಖಂಡರಾದ ಶಬ್ಬೀರ್ ಜಾನ್ , ಕಾಂಗ್ರೆಸ್ ಮುಖಂಡರಾದ ಬೋನಾಕ್ಸ್ ಹೆಬ್ನಲ್ಲಿ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ನದೀಮ್ ಶರೀಫ್ ಮತ್ತು ಕಾಂಗ್ರೆಸ್ ಮುಖಂಡರಾದ ಡಿಸಿ ಸಣ್ಣ ಸ್ವಾಮಿ, ಚಾಲ್ಸ್, ಹಾಗೂ ಜಾವಿದ್ ಕುಶಾಲನಗರ, ಮಹೇಶ್ ಬೈಕೆರೆ, ಬಿಲಾಲ್ ಫೈರೋಜ್ ಕುಶಾಲನಗರ,ಕತ್ತಿ ಲೋಕೇಶ್ ಬಾಲುಪೇಟೆ, ಮಹಿಳಾ ಘಟಕದ ಸದಸ್ಯರಾದ ಸರೋಜ, ಗೀತಾ, ಇನ್ನು ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತ ಬಂಧುಗಳು ಈ ಸಂದರ್ಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *