ಸಕಲೇಶಪುರ : ಹೆಬ್ಬಸಾಲೆ ಗ್ರಾಮದ ದಿವಂಗತ ದೇವಮ್ಮ ನಂಜೇಗೌಡರ ಸ್ಮಾರಣರ್ಥ ನೆಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಸ್ಥಾವಿಕವಾಗಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ ಯೆಡೇಹಳ್ಳಿ ಆರ್ ಮಂಜುನಾಥ್ ರವರು ಸುತ್ತೂರು ಮಠದ ಪರಮ ಪೂಜ್ಯರು ರಾಜ್ಯ, ದೇಶ, ವಿದೇಶಗಳಲ್ಲಿ, ಶಾಲಾ, ಕಾಲೇಜ್, ಆಸ್ಪತ್ರೆ ಗಳನ್ನು ತೆರೆಯುವ ಮೂಲಕ ವಿದ್ಯಾದಾನ, ವಸತಿ ವ್ಯವಸ್ಥೆ ಹಾಗೂ ಅರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ 12 ನೇ ಶತಮಾನದಲ್ಲಿ ಶರಣರು ಮಾಡಿದ ಆದರ್ಶ ಗಳನ್ನು ಸಾರ್ವಜನಿಕರಿಗೆ ತಲುಪಿಸುತ್ತಿದ್ದಾರೆ, ಇದರ ಪ್ರಯಕ್ತ ವಾಗಿ ಮಕ್ಕಳಿಗೆ ಇಂದು ದತ್ತಿ ಉಪನ್ಯಾಸ ಮತ್ತು ಚರ್ಚಾ ಸ್ಪರ್ಧೆ ಕಾರ್ಯಕ್ರಮ ನೆಡೆಸುತ್ತಿದ್ದೇವೆ ಎಂದರು

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಮಾತನಾಡಿ 12 ನೇ ಶತಮಾನದಲ್ಲಿ ಶರಣರು, ವಚನ ಕಾರರು ನಮ್ಮ ದೇಶಕ್ಕೆ ಹಲವಾರು ಸಂದೇಶಗಳನ್ನು ನೀಡಿದ್ದಾರೆ, ಅವುಗಳನ್ನೆಲ್ಲ ನಾವುಗಳು ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕೃತರಾಗಬೇಕು ಎಂದು ತಿಳಿಸಿದರು,

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಲೋಹಿತ್ ಕೌಡಳ್ಳಿ ಮಾತನಾಡುತ್ತ ಶರಣ ಸಾಹಿತ್ಯ ಪರಿಷತ್ ಯಾವುದೇ ಜಾತಿ ಮತ್ತು ವರ್ಗಕ್ಕೆ ಸೀಮಿತವಲ್ಲ ಮನುಜ ಜಾತಿಯದಾಗಿದ್ದು ನಮ್ಮ ದೇಶ ಶರಣರು ವಚನಗಾರರಿಂದ ಶ್ರೀಮಂತ ದೇಶವಾಗಿದ್ದು, ಮುಂದಿನ ಪೀಳಿಗೆಗೆ ಶರಣರ ಮತ್ತು ವಚನಗರರ ಸಂದೇಶಗಳನ್ನು ಕೊಂಡಯ್ಯ ಬೇಕು ಎಂದರು

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರ್ಚನಾ ಜಯಂತ್, ಶಾರದಾ ಗುರುಮೂರ್ತಿ, ಆರ್ ಮಂಜುನಾಥ್, ಮೀನಾಕ್ಷಿ ಖಾದರ್, ಶ್ಯಾಮಲಾ ನಾಗೇಂದ್ರ, ಆಲೂರು ವಿಜಯ ಕುಮಾರ್ ಭಾಗವಹಿಸಿದ್ದರು

ಬೇರೆ ಬೇರೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿತ್ತಿರುವ ಕೃಷಿ ನಿರ್ದೇಶಕರ ಪ್ರಕಾಶ್ ಕುಮಾರ್, ರೇಣುಕಾರಾಧ್ಯ, ಶಾರದಾ ಗುರುಮೂರ್ತಿ ರವನ್ನು ಸನ್ಮಾನಿಸಲಾಯಿತು ಚರ್ಚಾ ಸ್ಪರ್ಧೆಯನ್ನು ಶಿಕ್ಷಕಿ ರೇಣುಕಾ ಬಾಯಿ ರವರು ನೆಡೆಸಿಕೊಟ್ಟು ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು ಕಾರ್ಯಕ್ರಮದ ಸ್ವಾಗತವನ್ನು ಸಮಿತಿ ಉಪಾಧ್ಯಕ್ಷರಾಧಾ ಹೇಮಲತಾ ವೆಂಕಟೇಶ್ ನೆರೆವೇರಿಸಿದರೆ ಕಾರ್ಯಕ್ರಮ ನಿರೂಪಣೆಯನ್ನು jss ಶಿಕ್ಷಕ ಚೆನ್ನಬಸಪ್ಪ ನೆರೆವೇರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *