
ಜನವರಿ 13 ರಿಂದ ಪ್ರಯಾಗರಾಜ್ನಲ್ಲಿ ಆರಂಭಗೊಂಡ ಮಹಾಕುಂಭಮೇಳ ಇಂದು ಸತತ ಆರು ವಾರಗಳ ನಂತರ ಅಂದ್ರೆ 45 ದಿನಗಳ ನಂತರ ಮಹಾಶಿವರಾತ್ರಿ ಪ್ರಯುಕ್ತ ಅಮೃತಸ್ನಾನದೊಂದಿಗೆ ಕೊನೆಗೊಳ್ಳಲಿದೆ.144 ವರ್ಷಗಳ ನಂತರ ನಡೆದ ಮಹಾಕುಂಭಮೇಳಕ್ಕೆ ಭಕ್ತಾದಿಗಳಿಂದ ನಿರೀಕ್ಷೆ ಮೀರಿ ಪ್ರೋತ್ಸಾಹ ದೊರೆಯಿತು. 40 ಕೋಟಿ ಜನರ ಆಗಮನದ ನಿರೀಕ್ಷೆಯಿಟ್ಟಿದ್ದ ಆಡಳಿತ ಮಂಡಳಿಯ ಲೆಕ್ಕಾಚಾರವೇ ತಲೆಕೆಳಗಾಗುವಂತೆ ಸುಮಾರು 60 ಕೋಟಿಗೂ ಹೆಚ್ಚು ಜನರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಇಂದು ಶಿವರಾತ್ರಿ, ಶಿವ ಹಾಗೂ ಪಾರ್ವತಿಯ ಸ್ಮರಣಾರ್ಥವಾಗಿ ವಿಶೇಷ ದಿನದಂದ ಅಮೃತ ಸ್ನಾನದೊಂದಿಗೆ ಕೊನೆಗೊಳ್ಳಲಿದೆ.
ಕುಂಭಮೇಳವನ್ನು ಒಟ್ಟು ಪ್ರತಿ ಮೂರು ವರ್ಷಕ್ಕೊಮ್ಮೆ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ನಡೆಸಲಾಗುತ್ತದೆ. ಪ್ರಯಾಗರಾಜ್, ಹರಿದ್ವಾರ, ಉಜ್ಜೈನಿ ಹಾಗೂ ನಾಶಿಕ್ ಇನ್ನು ಮತ್ತೆ ಪ್ರಯಾಗರಾಜ್ನಲ್ಲಿ ಕುಂಭಮೇಳ ನಡೆಯಬೇಕು ಅಂದ್ರೆ 12 ವರ್ಷ ಕಾಯಬೇಕು 2037ಕ್ಕೆ ಪ್ರಯಾಗರಾಜ್ನಲ್ಲಿ ಕುಂಭಮೇಳ ನಡೆಯಲಿದೆ.
ಮಹಾಕುಂಭಮೇಳದಲ್ಲಿ ಅಮೃತಸ್ನಾನದಿಂದಾಗಿ ಪವಿತ್ರ ನದಿಗಳ ಸಂಗಮದಲ್ಲಿ ಮಿಂದೆಳುವುದುರಿರಂದ ನಮ್ಮ ಪಾಪಗಳೆಲ್ಲಾ ಕರಗಿ ಹೊಗಿ, ಮೋಕ್ಷದ ದಾರಿಗೆ ನಾವು ತೆರೆದುಕೊಳ್ಳುತ್ತೇವೆ ಎಂಬ ಪ್ರತೀತಿ ಇದೆ. ಹೀಗಾಗಿ ಪ್ರತಿ ಕುಂಭಮೇಳವು ಭಕ್ತಸಾಗರದಿಂದ ತುಂಬಿ ಹೋಗುತ್ತದೆ. ಈಗ ಪ್ರಯಾಗರಾಜ್ನಲ್ಲಿ ಮಹಾಕುಂಭಮೇಳಕ್ಕೆ ತೆರೆ ಬೀಳಲಿದೆ.
ಮುಂದಿನ ಪೂರ್ಣ ಕುಂಭಮೇಳ ಮಹಾರಾಷ್ಟ್ರದ ನಾಶಿಕ್ನಲ್ಲಿ 2027ರಂದು ನಡೆಯಲಿದೆ. 12 ವರ್ಷಗಳ ಹಿಂದೆ ಅಂದ್ರೆ 2013ರಲ್ಲಿ ನಾಶಿಕ್ನಲ್ಲಿ ಪೂರ್ಣಕುಂಭಮೇಳ ನಡೆದಿತ್ತು. ನಾಶಿಕ್ನ್ನು ಕೂಡ ನಾವು ಧಾರ್ಮಿಕ ಹಾಗೂ ಪೌರಾಣಿಕವಾಗಿ ಪವಿತ್ರ ಸ್ಥಳ ಎಂದು ಗುರುತಿಸುತ್ತೇವೆ. ಮುಂಬರುವ ಪೂರ್ಣಕುಂಭಮೇಳ ಗೋದಾವರಿ ನದಿ ತೀರದಲ್ಲಿ ನೆಡಯಲಿದೆ. ಇದನ್ನು ಸಿಂಹಹಸ್ತಾ ಕುಂಭಮೇಳ ಎಂದು ಕೂಡ ಕರೆಯಲಾಗುತ್ತದೆ. ಸುಮಾರು 17ನೇ ಶತಮಾನದಿಂದಲೂ ಕೂಡ ನಾಶಿಕ್ನಲ್ಲಿ ಕುಂಭಮೇಳ ನಡೆಯುತ್ತಲೇ ಬಂದಿವೆ ಎಂಬುದಕ್ಕೆ ಪ್ರಮಾಣ ಸಿಗುತ್ತವೆ.
