ಸಕಲೇಶಪುರ : ತಾಲೂಕಿನಲ್ಲಿ ಮಾನವ ಪ್ರಾಣಿಗಳ ಸಂಘರ್ಷ ನಿರಂತರವಾಗಿ ಮುಂದುವರೆದಿದ್ದು ಪ್ರಾಣಿಗಳ ಉಪಟಳದಿಂದ ಇಲ್ಲಿನ ಕಾಫಿ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರು ಬೇಸತ್ತಿದ್ದು ಒಂದು ಕಡೆ ಕಾಡಾನೆಗಳ ಹಾವಳಿಯಾದರೆ ಮತ್ತೊಂದೆಡೆ ಕಾಡು ಕೋಣಗಳ( ಕಾಟಿ) ಉಪಟಳ ಹೆಚ್ಚಾಗಿದೆ

ಇಂದು ಸಕಲೇಶಪುರ ತಾಲೂಕು ಹಾನುಬಾಳು ಹೋಬಳಿ ಕ್ಯಾಮನಹಳ್ಳಿ ಗ್ರಾಮ ಸಣ್ಣ ರೈತ ಲೋಕೇಶ್ ಎಂಬುವವರು ತಮ್ಮ ಕಾಫಿ ತೋಟದಲ್ಲಿ ಮದ್ಯಾಹ್ನ ಕೆಲಸ ಮಾಡುವ ಸಂದರ್ಭದಲ್ಲಿ ಏಕಾ ಏಕಿ ಕಾಟಿಯೊಂದು ದಾಳಿ ಮಾಡಿದೆ

ಎದೆಯ ಭಾಗಕ್ಕೆ ಕೋಡಿನಿಂದ ಚುಚ್ಚಿ ಗಾಯಗೊಳಿಸಿದ್ದು ಸದ್ಯ ಲೋಕೇಶ್ ಅವರು ಪ್ರಾಣಪಾಯದಿಂದ ಪಾರಾಗಿದ್ದು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕಾಡಾನೆ ಹಾಗೂ ಕಾಡುಕೋಣಗಳನ್ನು ನಿಯಂತ್ರಣ ಮಾಡದ ಅರಣ್ಯ ಇಲಾಖೆಯ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *