ಸಕಲೇಶಪುರ : ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಪರಿಷತ್ತಿನ ವತಿಯಿಂದ ಡಿಸೆಂಬರ್ 16 ಮತ್ತು 17 ರಂದು ಬೆಂಗಳೂರಿನಲ್ಲಿ ನಡೆದ ದೇವಸ್ಥಾನಗಳ ಅಧಿವೇಶನದಲ್ಲಿ ದೇವಸ್ಥಾನಗಳ ರಕ್ಷಣೆಗೆ ಈ ಕೆಳಗಿನ ನಿರ್ಣಯವನ್ನು 800 ಕ್ಕೂ ಅಧಿಕ ದೇವಸ್ಥಾನಗಳ ವಿಶ್ವ ವಿಶ್ವಸ್ಥರು ಅನುಮೋದನೆ ಮಾಡಿದರು. ದಯಮಾಡಿ ದೇವಸ್ಥಾನಗಳ ಸಂರಕ್ಷಣೆ ದೃಷ್ಟಿಯಿಂದ ಈ ನಿರ್ಣಯಗಳನ್ನು ತಾವು ಅನುಷ್ಠಾನಕ್ಕೆ ತರಬೇಕು ಎಂದು ವಿನಂತಿ.

1. ಕರ್ನಾಟಕದಲ್ಲಿ ಪ್ರಾಚೀನ ಅಥವಾ ಐತಿಹಾಸಿಕ ಮಹತ್ವವಿರುವ ಆದರೆ ಆಡಳಿತ ಹಾಗೂ ಪುರಾತತ್ವ ವಿಭಾಗದಿಂದ ದುರ್ಲಕ್ಷಿಸಲ್ಪಟ್ಟಿರುವ ದೇವಸ್ಥಾನಗಳನ್ನು ತಕ್ಷಣ ಜೀರ್ಣೋದ್ಧಾರ ಮಾಡಲು ಕರ್ನಾಟಕ ಸರಕಾರವು ಮುಂಗಡ ಪತ್ರದಲ್ಲಿ ಸಾಕಷ್ಟು ಅನುದಾನವನ್ನು ನೀಡಬೇಕು.

2. ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಿಂದ ಸಂಗ್ರಹವಾದ ಕಾಮನ್ ಪೂಲ್ ನಿಧಿಯನ್ನು ಅನ್ಯ ಯಾವುದೇ ಉದ್ದೇಶಕ್ಕೆ ಬಳಸದೇ ಕೇವಲ ಹಿಂದೂ ಧಾರ್ಮಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು.

3. ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ದೇವಸ್ಥಾನಗಳ ಮೂಲಕ ಭಕ್ತರಿಗೆ, ಮಕ್ಕಳಿಗೆ ಸಂಸ್ಕಾರ ನೀಡುವುದು ಮತ್ತು ಹಿಂದೂ ಧರ್ಮ ಶಿಕ್ಷಣವನ್ನು ನೀಡಲು ವ್ಯವಸ್ಥೆ ಮಾಡಬೇಕು.

4. ಕರ್ನಾಟಕದಲ್ಲಿ ಧಾರ್ಮಿಕ ಮಹತ್ವವಿರುವ ತೀರ್ಥಕ್ಷೇತ್ರಗಳು, ಶ್ರೀಕ್ಷೇತ್ರ, ಕೋಟೆಗಳಲ್ಲಿನ ದೇವಸ್ಥಾನಗಳ ಜಮೀನಿನ ಮೇಲೆ ಖಾಸಗಿಯವರ ಅತಿಕ್ರಮಣ, ಅನ್ಯ ಮತೀಯರ ಅತಿಕ್ರಮಣಗಳನ್ನು ಕರ್ನಾಟಕ ಸರಕಾರ ಸಮೀಕ್ಷೆ ಮಾಡಿ ತಕ್ಷಣ ಆ ಅತಿಕ್ರಮಣಗಳನ್ನು ತೆರವುಗೊಳಿಸಬೇಕು. ಈ ವಿಷಯದಲ್ಲಿ ನಡೆಯುತ್ತಿರುವ ನ್ಯಾಯಾಂಗ ಖಟ್ಟೆಗಳಿಗಾಗಿ ತ್ವರಿತಗತಿ (Fast track court) ನ್ಯಾಯಾಲಯಗಳನ್ನು ನಿರ್ಮಾಣ ಮಾಡಬೇಕು.

5. ದೇವಸ್ಥಾನಗಳ ಪರಿಸರದಲ್ಲಿ ಹಾಗೂ ತೀರ್ಥಕ್ಷೇತ್ರದ ಸ್ಥಳಗಳ ಪಾವಿತ್ರ್ಯ, ರಕ್ಷಣೆಗಾಗಿ ಮದ್ಯ ಹಾಗೂ ಮಾಂಸ ನಿಷೇಧ ಮಾಡಬೇಕೆಂದು ಕರ್ನಾಟಕ ಸರಕಾರ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

6. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಯಾವುದೇ ಖಾಸಗಿ ದೇವಸ್ಥಾನಗಳನ್ನು ಸರಕಾರವು ವಶಪಡಿಸಿಕೊಂಡಿದ್ದರೆ, ಅದರ ಸಮಸ್ಯೆ ಮತ್ತು ಕಟ್ಟೆಗಳನ್ನು ಬಗೆಹರಿಸಿ. 6 ತಿಂಗಳ ಒಳಗೆ ವಾಪಾಸು ಅದರ ಮೂಲ ವಾರಸುದಾರರಿಗೆ ನೀಡಬೇಕೆಂದು ಆದೇಶ ನೀಡಿದೆ. ಈ ಆದೇಶದ ಅನ್ವಯ ಕರ್ನಾಟಕ ಕೆಲವು ಖಾಸಗಿ ದೇವಸ್ಥಾನಗಳ ವಿಷಯದಲ್ಲಿ ಸರಕಾರವು ವಶಪಡಿಸಿಕೊಂಡು ಹಲವು ವರ್ಷಗಳು ಸಂದಿದೆ ಮತ್ತು ನಿರಂತರ ಕಾನೂನು ಹೋರಾಟದ ನಂತರ ಮಾನ್ಯ ನ್ಯಾಯಾಲಯವು ಸಂಬಂದಿತ ಖಾಸಗಿ ದೇವಸ್ಥಾನಗಳ ಪರವಾಗಿ ಆದೇಶ ನೀಡಿದರೂ ಸಹ. ಇಂದಿಗೂ ಸಹ ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿ ಇದೆ. ಈ ಸಮಸ್ಯೆಗೆ ಕೂಡಲೇ ಪರಿಹಾರ ಮಾಡಬೇಕು.

7. ಧಾರ್ಮಿಕ ದತ್ತಿ ಇಲಾಖೆಯ ಸಿ ಗ್ರೇಡ್ ದೇವಸ್ಥಾನಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲು ಇರುವ ಕಾನೂನು ಕಟ್ಟೆಗಳನ್ನು ಬಗೆಹರಿಸಬೇಕು. ದೇವಸ್ಥಾನಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು.

8. ದೇವಸ್ಥಾನಗಳಲ್ಲಿ ಭಕ್ತರು ಶ್ರದ್ಧೆಯಿಂದ ಅರ್ಪಣೆ ಮಾಡಿದ ನಿಧಿಯನ್ನು ಅನ್ಯ ಅಭಿವೃದ್ಧಿ ಕಾರ್ಯಕ್ಕಾಗಿ ಉಪಯೋಗಿಸಬಾರದು ಮತ್ತು ದೇವಸ್ಥಾನಗಳ ಸಂಪತ್ತನ್ನು ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರಕ್ಕಾಗಿ ಮಾತ್ರ ಸರಕಾರವು ಉಪಯೋಗಿಸಬೇಕು.

9. ದೇವಸ್ಥಾನದ ಜಾತ್ರೆ ಉತ್ಸವ ಇತ್ಯಾದಿ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ದೇವರ ಮೇಲೆ ಶ್ರದ್ಧೆ ಇರುವವರಿಗೆ ಮಾತ್ರ ನೀಡಬೇಕು ಮತ್ತು ಅನ್ಯ ಮತೀಯರಿಗೆ ವ್ಯಾಪಾರ ವಹಿವಾಟು ಮಾಡುವುದಕ್ಕೆ ಅವಕಾಶ ನೀಡಬಾರದು. ಎಂಬ ನಿರ್ಣಯವನ್ನು ದಿನಾಂಕ:19.03.25 ರಂದು ಸಕಲೇಶಪುರದ ಓಂ ಮಂದಿರದಲ್ಲಿ ನಡೆದ ಕರ್ನಾಟಕ ಮಂದಿರ ಮಹಾಸಂಘ ಹಾಗೂ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ನಿರ್ಣಯ ಮಾಡಿ 21.03.25 ರಂದು ತಹಶೀಲ್ಧಾರ್ ಸಕಲೇಶಪುರ ಅವರ ಮುಖೇನ ರಾಜ್ಯ ಸರ್ಕಾರಕ್ಕೆ ರವಾನೆ ಮಾಡಲು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮಂಜುನಾಥ ಹತ್ವಾರ್, ಆರ್ಎಸ್ಎಸ್ ಮುಖಂಡ ಸತ್ಯನಾರಾಯಣ್ ಗುಪ್ತಾ , ರಘು ಸಕಲೇಶಪುರ, ವಿಠ್ಠಲ್ ಏನ್.ಎಸ್ ಅಶ್ವಥನಾರಾಯಣ, ದುಷ್ಯಂತ್ ಗೌಡ, ಶೇಖರ್ ಕಬ್ಬಿನಗದ್ದೆ, ಹರೀಶ್ ಆಚಾರ್, ಬಾಲಣ್ಣ,ಬಸವರಾಜು,ಕೃಷ್ಣಜೀ ರಾವ್, ರವಿ ಹಾರ್ಲೆ, ಕೌಶಿಕ್, ಶಿವೂ ಜಿಪ್ಪಿ. ಉಪಸ್ಥಿತಿ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *