
ಹಾಸನ : ಇಂದು ನಿಟ್ಟೂರು ಪಂಚಾಯಿತಿ ಪ್ರಜ್ಞಾ ಮಹಿಳಾ ಒಕ್ಕೂಟದ ವತಿಯಿಂದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ, ಮಾಸಿಕ ಸಂತೆ ಮತ್ತು ಮಹಿಳಾ ದಿನಾಚರಣೆಯನ್ನು ಎಲ್ಲಾ ಸ್ವ ಸಹಾಯ ಸಂಘಗಳ ಸದಸ್ಯರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು
ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ್ ಪಿಡಿಓ ಮಲ್ಲೇಶ್ ಸದಸ್ಯರಾದ ಚಂದ್ರಶೇಖರ್ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಂಯೋಜಕರಾದ ಪವನ್ ಕುಮಾರ್, ಹಾಸನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ವೇಣುಗೋಪಾಲ್ H.K, FLC ಮಲ್ಲೇಶ್ ಮತ್ತು ಎಲ್ಲಾ NRLM ಸಿಬ್ಬಂದಿಗಳು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಮಹಿಳೆಯರಿಗಿರುವ ಸವಲತ್ತು ಸೌಲಭ್ಯಗಳು ಧೋರಣೆಗಳ ಬಗ್ಗೆ ಅತಿಥಿಗಳು ಮಾಹಿತಿಗಳನ್ನು ತಿಳಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಾರ್ಯಕ್ರಮದಲ್ಲಿ ವಿವರಿಸಿದರು.
