
ಸಕಲೇಶಪುರ : ವಕ್ಸ್ ಸಂಶೋಧನಾ ಕಾನೂನು ಜಾರಿಗೆ ತರಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳದಮುಖ್ಯಮಂತ್ರಿ ನೀಡಿದ ಹೇಳಿಕೆಯಿಂದ ಇಡೀ ರಾಜ್ಯದಲ್ಲಿ ದಂಗೆ ಪ್ರಾರಂಭವಾಗಿದ್ದು ಮುರ್ಷದಾಬಾದ್ ನಲ್ಲಿ ಹಿಂದೂಗಳು ತಮ್ಮ ಸ್ವಂತ ಊರನ್ನು ಬಿಟ್ಟು ಪಲಾಯನ ಮಾಡುತ್ತಿದ್ದಾರೆ ಮುರ್ಷದಾಬಾದ್ ನಲ್ಲಿ ಇರುವ ಹಿಂದೂಗಳು ತಮ್ಮ ಮನೆ ಮಠ,ಅಸ್ತಿ, ಕಟ್ಟಡ ಜಮೀನು ಎಲ್ಲವನ್ನು ಬಿಟ್ಟು ನಿರಾಶಿತರ ಕೇಂದ್ರದಲ್ಲಿ ತಮ್ಮದೇ ನೆಲದಲ್ಲಿ ಪರಕೀಯರಾಗಿ ಬದುಕುವ ರೀತಿ ವಾತಾವರಣ ನಿರ್ಮಾಣ ಮಾಡಿ ಪಲಾಯನ ಮಾಡಲು ಮನೆಗಳಿಗೆ ಬೆಂಕಿ ಹಚೊದು ಕಲ್ಲು ತೂರಾಟ ಮಾಡಿ ಭಯಭೀತಗೊಳಿಸಿದ್ದಾರೆ
ಮಮತಾ ಬ್ಯಾನರ್ಜಿ ತಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಯಾವುದೇ ದ್ವೇಷ ಭಾವನೆಯಿಂದ ಒಂದು ಸಮುದಾಯದ ಪರವಾಗಿ ನಿಲ್ಲದೆ ಕೋಮುಭಾವನೆ ಪ್ರಚೋದನೆ ಮಾಡುವುದಿಲ್ಲ ಎಂದು ಸಂವಿಂಧಾನದ ಅಡಿಯಲ್ಲಿ ಪುಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಡಿದ ಪಮಾಣದ ವಿರುದ್ಧವಾಗಿ ಒಂದು ಮುಸ್ಲಿಂ ಸಮುದಾಯವನ್ನು ಓಲೈಕೆ ಮತ್ತು ತುಷ್ಟಿಕರಣ ಅತಿರೇಕವಾಗಿ ಮಾಡುತ್ತಿದ್ದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ
ಮುಖ್ಯಮಂತ್ರಿ ಅಂದರೆ ರಾಜ್ಯದ ಪ್ರತಿ ಪುಜೆಯ ರಕ್ಷಣೆ ಮತ್ತು ಅವನ ಸುರಕ್ಷತೆ ಮಾಡಬೇಕಾಗಿದ್ದು ಮಮತಾ ಬ್ಯಾನರ್ಜಿ ಅದರ ಹಿಂದೂ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ ಕೊಲೆ ಲೂಟಿ ಅತ್ಯಾಚಾರ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ಪಶ್ಚಿಮ ಬಂಗಾಳದ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿ ಸಾರ್ವಜನಿಕರಿಗೆ ಹಿಂದುಗಳಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ ಸಂಘಟಕರು
ಪಶ್ಚಿಮ ಬಂಗಾಳದಲ್ಲಿ ಈಗ ನಡೆದಿರುವ ಘಟನೆಯಲ್ಲಿ ಚುನಾವಣಾ ಪೂರ್ವ ಮತ್ತು ಫಲಿತಾಂಶ ಬಂದ ನಂತರ ನಡೆದಿರುವ ದೌರ್ಜನ್ಯಗಳು ಕೊಲೆಗಳು ಹಲ್ಲೆಗಳು ನಾಗರೀಕ ಸಮಾಜ ತಲೆ ತಗ್ಗಿಸುವಂಥದ್ದು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಬಾಂಗ್ಲಾ ಕ್ಕೆ ಹೋಗಿ ತಲೆ ಮರೆಸಿಕೊಂಡು ಗೂಂಡಾಗಿರಿ ಮಾಡೋದು ಎಗ್ಗಿಲ್ಲದೆ ನಡೆಯುತ್ತಿದೆ.
ಅಕ್ರಮ ಬಾಂಗ್ಲಾದೇಶಿ ಮುಸ್ಲಿಂ ಒಳನುಸುಳುಕೋರರನ್ನ ಭಾರತ ಗಡಿ ಒಳಗಿನಿಂದ ಅತಿ ಹೆಚ್ಚು ಪಶ್ಚಿಮ ಬಂಗಾಳದಿಂದ ಬರುತ್ತಿರೋದು ಇದು ಭಾರತದ ಆಂತರಿಕಭದ್ರತೆಗೆ ಕುತ್ತು ಬರುತ್ತದೆ. ಪಶ್ಚಿಮ ಬಂಗಾಳದಲ್ಲಿ ಹಿಂದೂ ಸಮಾಜದ ಮೇಲೆ ಹಿಂದೂ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಸೇನಾಕಾರ್ಯಾಚರಣೆ ಆಗಬೇಕಿದ್ದು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತಂದು ಶಾಂತಿ ನೆಲಸಲು ಸೇನೆ ನಿಯೋಜಿಸಿ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡಿದ ದುಷ್ಟರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡ ರಘು ಸಕಲೇಶಪುರ, ಶಿವು( ಜಿಪ್ಪಿ). ಇತರರು ಇದ್ದರು.
