ಸಕಲೇಶಪುರ : ಇಲ್ಲಿನ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಪ್ರೇಮಲತಾ ರವೀಂದ್ರ ಅವಿರೋಧವಾಗಿ ಆಯ್ಕೆಯಾದರುಈ ಹಿಂದೆ ಅಧ್ಯಕ್ಷರಾಗಿದ್ದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಂತ ಅವರು ಒಡಂಬಡಿಕೆಯಿಂದ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಾಗಿತ್ತು.

ತೆರವಾಗಿದ್ದ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಶುಕ್ರವಾರ ಚುನಾವಣೆ ನಡೆಯಿತು.

ಬಿಜೆಪಿ ಹಾಗೂ ಜೆಡಿ‌ಎಸ್ ಮೈತ್ರಿ ಬೆಂಬಲಿತ ಬಾಳ್ಳುಪೇಟೆ ಕ್ಷೇತ್ರದ ಸದಸ್ಯೆ ಪ್ರೇಮಲತಾ ರವೀಂದ್ರ ಹೊರತುಪಡಿಸಿ ಬೇರೆ ಯಾವುದೇ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 16ಸದಸ್ಯರು ಇರುವ ಗ್ರಾ.ಪಂನಲ್ಲಿ ಬಿಜೆಪಿ, ಜೆಡಿ‌ಎಸ್ ಬೆಂಬಲಿತ 14  ಸದಸ್ಯರು ಹಾಜರಾಗಿದ್ದರು. ಕಾಂಗ್ರೆಸ್ ಬೆಂಬಲಿತ ಓರ್ವ ಸದಸ್ಯೆ ಹಾಗೂ ಅನಾರೋಗ್ಯದಿಂದ ಒಬ್ಬ ಸದಸ್ಯರು ಗೈರಾಗಿದ್ದರು.

ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಅರವಿಂದ್ , ಸಹ ಚುನಾವಣಾಧಿಕಾರಿಯಾಗಿ ತಾಲೂಕು ಚುನಾವಣಾ ಶಿರಸ್ತಿದಾರ್ ಶ್ವೇತಾ , ಪಿಡಿ‌ಒ ಹರೀಶ್ ಕರ್ತವ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷೆ ಪ್ರೇಮಲತಾ ಮಾತನಾಡಿ, ಎಲ್ಲ ಸದಸ್ಯರ ಸಹಕಾರ ಪಡೆದು ತಮ್ಮ ಅಧಿಕಾರ ಅವಧಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಥಮವಾಗಿ ಮೂಲಭೂತ ಸಮಸ್ಯೆಗಳಿಗೆ ವಿಶೇಷ ಗಮನಹರಿಸಲಾಗುವುದು ಎಂದರು.

ಈ ಸಂಧರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಎಚ್.ಎಂ ಸ್ವಾಮಿ ಸದಸ್ಯರಾದ ರೋಹಿತ್, ರಾಜೇಶ್, ಪ್ರಕಾಶ್, ಕೃಷ್ಣಮೂರ್ತಿ, ಸಂಜು, ಭರತ್ ರೈ, ಶಿಲ್ಪಾ ಮಲ್ಲಿಕ್ ಶಾಂತ, ಶೋಭಾ,ರತ್ನ, ಲತಾ, ಕವಿತಾ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ್ ಮೆಣಸಮಕ್ಕಿ,  ಮುಖಂಡರಾದ ಸುರೇಶ್, ಚಂದ್ರು, ಬಸವರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *